ಮತ್ತೆ ಏರಿದ ಕೋರೋನಾ ಸೋಂಕು: ದೇಶದಲ್ಲಿ 16,000+ ಕೇಸ್‌ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದೆಲ್ಲೆಡೆ ಕೊಂಚ ಇಳಿಮುಖವಾಗಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಇಂದು ಮತ್ತೆ ಏರಿಕೆ ಯಾಗಿದೆ. 16,000 ಕ್ಕೂ ಅಧಿಕ ಕೋವಿಡ್‌ ಪ್ರಕರಂಣಗಳು ದಾಖಲಾಗಿದೆ.

ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಮಂಗಳವಾರ 16,906 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗಿದೆ. ಇದು ಹಿಂದಿನ ದಿನ 13,000ದ ಆಸುಪಾಸಿನಲ್ಲಿತ್ತು. ಪ್ರಸ್ತುತ ಒಂದೇ ದಿನ 3000 ಕ್ಕೂ ಅಧಿಕ ಏರಿಕೆಯಾಗಿದೆ.

ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 1,32,457 ರಷ್ಟಿದ್ದು ದೈನಂದಿನ ಪಾಸಿಟಿವಿಟಿ ದರವು 3.68% ದಷ್ಟಿದೆ. ಮತ್ತು ವಾರಾಂತ್ಯದ ಪಾಸಿಟಿವಿಟಿ ದರವು 4.26%ದಷ್ಟಿದೆ.

ಒಟ್ಟೂ 15,447ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು ಚೇತರಿಕಾ ದರವು 98.49% ದಷ್ಟಿದೆ. ಇಲ್ಲಿಯವೆಗೂ ಒಟ್ಟು 4,30,11,874 ಮಂದಿ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಒಟ್ಟೂ 199.12 ಕೋಟಿ ಲಸಿಕೆ ವಿತರಿಸಲಾಗಿದ್ದು ಮಂಗಳವಾರ ಒಂದೇ ದಿನದಲ್ಲಿ 4,59,302 ಕೊವಿಡ್‌ ಟೆಸ್ಟ್‌ ನಡೆಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!