ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಕೊವಿಡ್ ಪ್ರಕರಣಗಳು 5000 ದಾಟಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಕೇರಳವು ಅತಿ ಹೆಚ್ಚು ಸೋಂಕು ಪೀಡಿತ ರಾಜ್ಯವಾಗಿದೆ.
ಕಳೆದ 24 ಗಂಟೆಗಳಲ್ಲಿ 4 ಹೊಸ ಸಾವುಗಳೊಂದಿಗೆ ಒಂದೇ ದಿನದಲ್ಲಿ ಕೊರೋನಾ ಪ್ರಕರಣಗಳು ಸುಮಾರು 500ರಷ್ಟು ಏರಿಕೆಯಾಗಿ 5364ಕ್ಕೆ ತಲುಪಿವೆ. ಕೇರಳವು ಅತಿ ಹೆಚ್ಚು ಸೋಂಕು ಪೀಡಿತ ರಾಜ್ಯವಾಗಿದ್ದು, ಸಕ್ರಿಯ ಪ್ರಕರಣಗಳು 1679ಕ್ಕೆ ತಲುಪಿವೆ.
ಇದರ ನಂತರದ ಸ್ಥಾನಗಳಲ್ಲಿ ಗುಜರಾತ್ (615), ಪಶ್ಚಿಮ ಬಂಗಾಳ (596) ಮತ್ತು ದೆಹಲಿ (592) ಇವೆ. ಕೇರಳದಲ್ಲಿ 2 ಸಾವುಗಳು ವರದಿಯಾಗಿವೆ, ಕರ್ನಾಟಕ ಮತ್ತು ಪಂಜಾಬ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಒಂದು ದಿನದಲ್ಲಿ 498 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದರೂ, ಕಳೆದ 24 ಗಂಟೆಗಳಲ್ಲಿ 764 ರೋಗಿಗಳನ್ನು ಗುಣಪಡಿಸಲಾಗಿದೆ ಅಥವಾ ಡಿಸ್ಚಾರ್ಜ್ ಮಾಡಲಾಗಿದೆ.