ಹೊಸದಿಗಂತ ವಿಜಯಪುರ:
ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತ, ಅದು ಮಿತಿ ಮೀರಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದರು.
ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಆಡಿಯೋ ವೈರಲ್ ವಿಷಯಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿಷಯದ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿ, ಬಿಜೆಪಿ ವೇಳೆ ಶೇ. 40 ಇತ್ತು, ಇವರು ಶೇ. 60 ಕ್ಕೆ ಬಂದಿದ್ದಾರೆ. ಕಾಂಟ್ರಾಕ್ಟರಗಳನ್ನು ಕೇಳಿ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾಂಟ್ರಾಕ್ಟರಗಳ ಬಿಲ್ ಬರದೆ ಮನೆ ಮಾರಿಕೊಳ್ಳುವ ಸ್ಥಿತಿ ಇದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಹಿಡಿದು ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.
ಟ್ಯಾಕ್ಸ್ ಹಾಕುತ್ತಿದ್ದಾರೆ, ಸ್ಟ್ಯಾಂಪ್ ಡ್ಯೂಟಿ ಹೆಚ್ಚಳ ಆಗಿದೆ. ಒಂದು ವರ್ಗಾವಣೆಯೂ ಪುಕ್ಸಟ್ಟೆ ಆಗುತ್ತಿಲ್ಲ. ಒಂದು ಕಡೆ ಗ್ಯಾರಂಟಿ ಹೆಸರಿನಲ್ಲಿ ಪುಕ್ಕಟೆ ಕೊಟ್ಟಿದ್ದೀವಿ ಅನ್ನುತ್ತಾರೆ. ಇನ್ನೊಂದು ಕಡೆ ಟ್ಯಾಕ್ಸ್ ಹಾಕುತ್ತಿದ್ದಾರೆ. ಸಾಲ ಪಡೆಯುವ ಜನರಿಗೆ ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದಾರೆ ಎಂದರು.
ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ರಕ್ಷಣೆ ಇಲ್ಲ, ರಾತ್ರಿ ಹನ್ನೆರಡು, ಒಂದು ಗಂಟೆಗೆ ಪೊಲೀಸರು ಅವರ ಮನೆಗಳಿಗೆ ಹೋಗುತ್ತಿದ್ದಾರೆ. ಅದು ಪೊಲೀಸರ ತಪ್ಪಲ್ಲ ಆರ್‌ಸಿಬಿ ಘಟನೆ ನೆಪದಲ್ಲಿ ದಯಾನಂದ ಅವರನ್ನು ಅಮಾನತ್ತು ಮಾಡಿದ್ದಾರೆ ಎಂದರು.
ಮಕ್ಕಳು, ಮೊಮ್ಮಕ್ಕಳ ವೈಭವೀಕರಣಕ್ಕೆ ಕಾರ್ಯಕ್ರಮ ಮಾಡಿದ್ದಾರೆ. ಪೊಲೀಸರ ಮಾತು ಕೇಳಲಿಲ್ಲ. ಸಿದ್ದಾರಾಮಯ್ಯ ವಿಧಾನ ಸೌಧದ ಕಟ್ಟೆಯ ಮುಖ್ಯಮಂತ್ರಿಯೊ ? ರಾಜ್ಯದ ಮುಖ್ಯಮಂತ್ರಿಯೋ ? ಅವರಿಗೆ ನಾಚಿಕೆ ಆಗಬೇಕು. ಅವರು ಮುಖ್ಯಮಂತ್ರಿ ಆದರೆ ರಾಜ್ಯದಲ್ಲಿ ತಿರುಗಾಡಲಿ ಎಂದು ಟೀಕಿಸಿದರು.
ಇದ್ಯಾವುದನ್ನೂ ಹೋರಾಟ ಮಾಡುವ ನೈತಿಕತೆಯನ್ನು ಬಿಜೆಪಿ ಕಳೆದುಕೊಂಡಿದೆ. ಏಕೆಂದರೆ ಅವರಿಗೆ ಬಿಎಸ್‌ವೈ ಪೋಕ್ಸೋ ಪ್ರಕರಣ ಮತ್ತು ಫೋರ್ಜರಿ ಸಹಿ ಬಗ್ಗೆ ವಾಟ್ಸಪ್ ಬೆದರಿಕೆ ಹಾಕಲಾಗುತ್ತಿದೆ ಎಂದರು.
ಚಕ್ರವರ್ತಿ ಸೂಲಿಬೆಲೆ ಮಾತನಾಡದಂತೆ ಮಂಗಳೂರು ಪೊಲೀಸರ ನೋಟಿಸ್ ವಿಚಾರಕ್ಕೆ, ಚಕ್ರವರ್ತಿ ಸೂಲಿಬೆಲೆ ಇತಿಹಾಸ ಓದಿಕೊಂಡಿದ್ದಾರೆ. ಪುಸ್ತಕ ಓದಿಕೊಂಡು ನಮ್ಮ ದೇಶದ ಸಂಸ್ಕೃತಿ ಹೇಗಿತ್ತು ಮೊಘಲರಿಂದ ಹೇಗೆ ಅನ್ಯಾಯ ಆಯ್ತು, ಔರಂಗಜೇಬ್ ಹೇಗೆ ಅನ್ಯಾಯ ಮಾಡಿದ, ಇದೆಲ್ಲ ಹೇಳಲೇ ಬೇಕಲ್ಲ. ಕಾಶ್ಮೀರದಲ್ಲಿ ಏನಾಯ್ತು ಹಿಂದೂಗಳನ್ನ ಕಟ್ಟಿಗೆ ಕೊರೆಯುವ ಮಷಿನ್‌ಗೆ ಹಾಕಿದರು. ಕೇರಳದಲ್ಲಿ ಇವತ್ತು ಏನಾಗ್ತಾ ಇದೆ, ಲವ್ ಜಿಹಾದ್ ಬಗ್ಗೆ ಮಾತನಾಡಲೇ ಬೇಕಲ್ಲ. ಹಿಂದೂಗಳ ಜಾಗೃತಿ ಮಾಡುವುದು ಅವರ ಕೆಲಸ. ಇದೆ ಅವರು ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಎಲ್ಲ ಹಿಂದೂ ನಾಯಕರನ್ನು ಮುಗಿಸಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಮುಂದಾಗಿದ್ದಾರೆ ಎಂದರು.