CINE| `ದೇವರ’ ಸಿನಿಮಾದ ಆಕ್ಷನ್ ಸೀಕ್ವೆನ್ಸ್‌ಗಾಗಿ ವಿಶ್ವದ ಅತ್ಯಂತ ದುಬಾರಿ ಕ್ಯಾಮರಾ ಬಳಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರ್.ಆರ್.ಆರ್ ಬಳಿಕ ಜ್ಯೂ.ಎನ್‌ಟಿಆರ್‌ ಅಭಿನಯದ ಚಿತ್ರ ‘ದೇವರ’ ಚಿತ್ರಕ್ಕಾಗಿ ಅಭಿಮಾನಿಗಳ ಕಾತರ ಹೆಚ್ಚಾಗಿದೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ ಬಹಳ ಮಹತ್ವಾಕಾಂಕ್ಷೆಯಿಂದ ಕೂಡಿರಲಿದೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ಮಲಯಾಳಂ ನಟ ಶೈನ್ ಟಾಮ್ ಚಾಕೋ ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ. ನಂದಮೂರಿ ಕಲ್ಯಾಣ್ ರಾಮ್ ಈ ಚಿತ್ರವನ್ನು ಮಿಕ್ಕಿಲಿನೇನಿ ಸುಧಾಕರ್ ಜೊತೆಗೆ ಬಹಳ ಮಹತ್ವಾಕಾಂಕ್ಷೆಯಿಂದ ನಿರ್ಮಿಸುತ್ತಿದ್ದಾರೆ. ಹಾಲಿವುಡ್ ಮೇಕರ್ ಗಳು ಕೂಡ ಈ ಚಿತ್ರಕ್ಕೆ ಕೈ ಹಾಕುತ್ತಿದ್ದಾರೆ. ಇದೀಗ ಈ ಸಿನಿಮಾದಿಂದ ಹೊಸ ವಿಷಯ ಬೆಳಕಿಗೆ ಬಂದಿದೆ.

ಈಗಾಗಲೇ ಹಾಲಿವುಡ್ ಸಿನಿಮಾ ‘ಟ್ರಾನ್ಸ್‌ಫಾರ್ಮರ್ಸ್’ಗೆ ಆ್ಯಕ್ಷನ್ ಪಾರ್ಟ್ ಡಿಸೈನ್ ಮಾಡಿದ್ದ ಸ್ಟಂಟ್ ಮಾಸ್ಟರ್ ‘ಕೆನ್ನಿ ಬೆಟ್ಸ್’ ಮತ್ತು ಆಕ್ವಾಮನ್ ಸಿನಿಮಾಗೆ ವಿಎಫ್ ಎಕ್ಸ್ ಡಿಸೈನರ್ ಆಗಿ ಕೆಲಸ ಮಾಡಿದ್ದ ‘ಬ್ರಾಡ್ ಮಿನ್ನಿಚ್’ ಈ ಸಿನಿಮಾಗೆ ಕೆಲಸ ಮಾಡುತ್ತಿರುವುದು ಗೊತ್ತೇ ಇದೆ. ಇದೀಗ ಈ ಸಿನಿಮಾಕ್ಕೆ ವಿಶ್ವದ ಅತ್ಯಂತ ದುಬಾರಿ ಕ್ಯಾಮೆರಾ ಬಳಸಲಾಗುತ್ತಿದೆಯಂತೆ. “ARRI ಅಲೆಕ್ಸಾಲ್ಫ್ ಮತ್ತು ARRI ಸಿಗ್ನೇಚರ್ ಪ್ರೈಮ್ ಲೆನ್ಸ್” ಅನ್ನು ಈ ಚಲನಚಿತ್ರದಲ್ಲಿ ನೀರೊಳಗಿನ ಆಕ್ಷನ್ ಸೀಕ್ವೆನ್ಸ್ ಅನ್ನು ಶೂಟ್ ಮಾಡಲು ಬಳಸಲಾಗಿದೆ. ಈ ಕ್ಯಾಮರಾ ಬಳಕೆಯಿಂದಾಗಿ ಸಿನಿಮಾದಲ್ಲಿ ದೃಶ್ಯಗಳು ಒಂದು ರೇಂಜ್ ನಲ್ಲಿ ಕಾಣಿಸುತ್ತವೆ.

ಏತನ್ಮಧ್ಯೆ, ಎನ್‌ಟಿಆರ್ ಇತ್ತೀಚೆಗೆ ಶೂಟಿಂಗ್‌ಗೆ ಸ್ವಲ್ಪ ಗ್ಯಾಪ್ ನೀಡಿದ್ದು, ತಮ್ಮ ಕುಟುಂಬದೊಂದಿಗೆ ದುಬೈಗೆ ಹೋಗುತ್ತಿದ್ದಾರೆ. ಅಲ್ಲಿ ಮುಂಬರುವ SIIMA ಪ್ರಶಸ್ತಿ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. RRR ಚಿತ್ರಕ್ಕಾಗಿ NTR ಅತ್ಯುತ್ತಮ ನಟನಾಗಿ ನಾಮನಿರ್ದೇಶನಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!