ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇನ್ಮುಂದೆ ಕಾಟನ್ ಕ್ಯಾಂಡಿ ನಿಷೇಧವಾಗಲಿದೆ ಹಾಗೂ ಗೋಬಿ ಮಂಚೂರಿ, ಕಬಾಬ್ಗೆ ಕೃತಕ ಬಣ್ಣ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದು, ಕಾಟನ್ ಕ್ಯಾಂಡಿ ಮಾರಾಟ ಹಾಗೂ ತಯಾರಿಕೆ ಕಂಡರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯಲ್ಲಿ ಬಣ್ಣಕ್ಕಾಗಿ ಬಳಕೆ ಮಾಡುವ ಅಂಶಗಳಲ್ಲಿ ಆರೋಗ್ಯಕ್ಕೆ ಹಾನಿಯಾಗುವ ಪದಾರ್ಥಗಳಿವೆ. ಈ ಬಗ್ಗೆ ಪರೀಕ್ಷೆ ನಡೆಸಲಾಗಿದೆ. ಈ ಅಂಶಗಳು ಪತ್ತೆಯಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಂದಿದ್ದಾರೆ.
ಗೋಭಿ ಮಂಚೂರಿ ಸಸ್ಯಾಹಾರ ಖಾದ್ಯ ಹಾಗಾಗಿ ಅದನ್ನು ನಿಷೇಧ ಮಾಡಲು ಆಗುವುದಿಲ್ಲ. ಆದರೆ ಗೋಬಿ ಮಾದರಿಯಲ್ಲಿ ರೋಡಮೈನ್ ಅಂಶ ಕಂಡುಬಂದರೆ ಕ್ರಮ ತಪ್ಪಿದಲ್ಲ ಎಂದು ಹೇಳಿದ್ದಾರೆ.