ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಚಿತ್ತೋರಗಢ ಜಿಲ್ಲೆಯ ಮಂಡ್ಫಿಯಾದಲ್ಲಿರುವ ಪ್ರಸಿದ್ಧ ಶ್ರೀ ಸನ್ವಾಲಿಯಾ ಸೇಠ್ ದೇವಸ್ಥಾನಕ್ಕೆ ಅನಾಮಧೇಯ ಭಕ್ತರೊಬ್ಬರು ಬೆಳ್ಳಿಯ ರಿವಾಲ್ವರ್ ಕಾಣಿಕೆಯಾಗಿ ಅರ್ಪಿಸಿದ್ದಾರೆ. ಇದು ದೇವಾಲಯದ ಆಡಳಿತ ಮಂಡಳಿ ಮತ್ತು ಭಕ್ತರನ್ನು ಬೆಚ್ಚಿಬೀಳಿಸಿದೆ.
ರಿವಾಲ್ವರ್ ಜೊತೆಗೆ ಒಂದು ಗುಂಡು ಮತ್ತು ಎರಡು ಬೆಳ್ಳುಳ್ಳಿ ಎಸಳುಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ಇವುಗಳೆಲ್ಲ ಬೆಳ್ಳಿಯಿಂದ ಮಾಡಿದ ವಸ್ತುಗಳಾಗಿದ್ದು, ಹುಂಡಿ ಎಣಿಕೆ ವೇಳೆ ರಾಶಿ ರಾಶಿ ಹಣದ ಮಧ್ಯೆ ಈ ವಿಶಿಷ್ಟ ಕಾಣಿಕೆ ಕಂಡುಬಂದಿದೆ. ದೇವಸ್ಥಾನಕ್ಕೆ ಇದೇ ಮೊದಲ ಬಾರಿ ಇಂತಹದ್ದೊಂದು ವಿಚಿತ್ರ ಕಾಣೆಕೆ ಬಂದಿದ್ದರಿಂದ ಎಲ್ಲೆಡೆ ಚರ್ಚೆ ನಡೆಯುತ್ತಿದೆ.
300 ಗ್ರಾಂ ತೂಕದ ಬೆಳ್ಳಿ ರಿವಾಲ್ವರ್ ಇದಾಗಿದ್ದು ಕಾಣೆಕೆ ನೀಡಿದ ಭಕ್ತ ತನ್ನ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಹಾಗಾಗಿ ಈ ವಿಚಿತ್ರ ಕಾಣಿಕೆಯು ದೇವಾಲಯದ ಆಡಳಿತ ಮಂಡಳಿಯ ತಲೆಬಿಸಿ ಮಾಡಿದೆ.