ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟ ಪ್ರಕಾಶ್ ರಾಜ್ ಅಂದರೆ ಎಲ್ಲರಿಗೂ ನಟನಾಗಿ ಇಷ್ಟಪಡುತ್ತಾರೆ. ಆದರೆ ಅವರ ವೈಯಕ್ತಿಕ ನಿಲುವುಗಳಿಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಾರೆ.
ಮೋದಿ ವಿರೋಧಿಯಾಗಿ ಹೆಚ್ಚು ಟೀಕೆಗೊಳಗಾಗುವ ಪ್ರಕಾಶ್ ರಾಜ್,ಇದೀಗ ಚಂದ್ರಯಾನ-3 ಲ್ಯಾಂಡಿಂಗ್‌ಗೆ ಮುನ್ನ ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್ ಅವರನ್ನು ಅಪಹಾಸ್ಯ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.
ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ವಿಶೇಷ ಪ್ರಾರ್ಥನೆಗಳು ಹಾಗೂ ಚಂದ್ರಯಾನ ಯೋಜನೆಯಲ್ಲಿ ಈವರೆಗಿನ ಯಶಸ್ಸಿಗೆ ಸಾಕಷ್ಟು ಪ್ರಶಂಸೆಗೆ ಒಳಗಾಗ್ತಿದ್ದಾರೆ.
ಅದರೆ, ಪ್ರಕಾಶ್ ರಾಜ್ ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್ ಚಹಾವನ್ನು ಸುರಿಯುತ್ತಿರುವ ವ್ಯಂಗ್ಯಚಿತ್ರವನ್ನು ಒಳಗೊಂಡ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, “BREAKING NEWS:- #VikramLander Wowww #justasking ಮೂಲಕ ಚಂದ್ರನಿಂದ ಬಂದ ಮೊದಲ ಫೋಟೋ” ಎಂಬ ಕ್ಯಾಪ್ಷನ್ ಅನ್ನೂ ಬರೆದುಕೊಂಡಿದ್ದಾರೆ.
ಈ ಟ್ವೀಟ್ ವೈರಲ್ ಆಗಿದ್ದು, ಈ ಪೋಸ್ಟ್‌ಗೆ ನೆಟ್ಟಿಗರು ಪ್ರಕಾಶ್ ರಾಜ್ ವಿರುದ್ಧ ತೀವ್ರ ಟೀಕೆ ಮಾಡ್ತಿದ್ದಾರೆ.
ಕ್ತಿ “ನೀವು ತುಂಬಾ ಕೆಳಮಟ್ಟಕ್ಕೆ ಇಳಿದಿದ್ದೀರಿ.. ನೀವು ಸಹ ದೇಶವಾಸಿ ಎಂದು ಹೇಳಲು ನಾಚಿಕೆಯಾಗುತ್ತದೆ. ಇಸ್ರೋ ಬಗ್ಗೆ ನನಗೆ ಹೆಮ್ಮೆ ಇದೆ!! ಜೈ ಹಿಂದ್’’ ಎಂದು ಪೋಸ್ಟ್ ಮಾಡಿದ್ದಾರೆ.
ಚಂದ್ರಯಾನ-3 ಆಗಸ್ಟ್ 23, 2023 ರಂದು (ಬುಧವಾರ), ಸುಮಾರು 18:04 IST ರಂದು ಚಂದ್ರನ ಮೇಲೆ ಇಳಿಯಲಿದೆ. ಇಸ್ರೋ ಚಂದ್ರನ ಮೇಲೆ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸ್ತಿದೆ.