ರಾಮಲಲಾನ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ: ಉದ್ಯಮಿ ಮುಕೇಶ್ ಅಂಬಾನಿ ‘ಆಂಟಿಲಿಯಾ’ ಮನೆ ಮೇಲೆ ರಾರಾಜಿಸಿದ ಜೈ ಶ್ರೀ ರಾಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ವಿಶ್ವವೇ ಕಾತುರದಿಂದ ಕಾಯುತ್ತಿದ್ದು, ಈ ಸಂಭ್ರಮಕ್ಕೆ ಇನ್ನೂ ಕೆಲವೇ ಕ್ಷಣ ಬಾಕಿ ಉಳಿದಿದೆ.

ಇತ್ತ ಭಗವಾನ್ ರಾಮನನ್ನು ಸ್ವಾಗತಿಸಲು ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ‘ಆಂಟಿಲಿಯಾ’ ನಿವಾಸವನ್ನು ಸಂಪೂರ್ಣವಾಗಿ ಅಲಂಕರಿಸಲಾಗಿದೆ.
ಮನೆಯನ್ನು ಹೂವಿನ ಗುಚ್ಛಗಳು ಮತ್ತು ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಲಾಗಿದೆ. ಹಿಂದು ಧರ್ಮದ ಚಿಹ್ನೆಗಳು ಮತ್ತು ಭಗವಾನ್ ರಾಮನಿಗೆ ಸಂಬಂಧಿಸಿದ ಚಿತ್ರಗಳನ್ನು ಮನೆಯ ಒಳಗೆ ಮತ್ತು ಹೊರಗೆ ಸ್ಥಾಪಿಸಲಾಗಿದೆ. ಅಲಂಕಾರದಿಂದ ಮನೆ ಕಂಗೊಳಿಸುತ್ತಿದೆ.

ಅಯೋಧ್ಯೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಂಬಾನಿ ಕುಟುಂಬ ಉತ್ಸುಕವಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಈ ಸಂದರ್ಭದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!