ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮ ಮಂದಿರದ ಉದ್ಘಾಟನೆ (Ram Mandir Inauguration) ಕ್ಷಣಗಣನೆ ಬಾಕಿ ಉಳಿದಿದ್ದು, ಈಗಾಗಲೇ ದೇಶ ವಿದೇಶಗಳಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹಲವು ಜನರು ಆಗಮಿಸುತ್ತಿದ್ದಾರೆ.
ಅನೇಕ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಸಿನಿಮಾ ನಟ-ನಟಿಯರ ಹೆಸರುಗಳು ಆಹ್ವಾನಿತರ ಪಟ್ಟಿಯಲ್ಲಿ ಇವೆ. ಈ ನಡುವೆ ಭಾರತೀಯ ಚಿತ್ರರಂಗದ ಕೆಲವು ಪ್ರಮುಖ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿಲ್ಲ. ಸಲ್ಮಾನ್ ಖಾನ್ (Salman Khan), ಆಮಿರ್ ಖಾನ್, ಶಾರುಖ್ ಖಾನ್ (Shah Rukh Khan) ಮುಂತಾದ ನಟರನ್ನು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಸುದ್ದಿಯಾಗಿದೆ.
ಬಾಲಿವುಡ್ನಲ್ಲಿ ಶಾರುಖ್ ಖಾನ್, ಆಮಿರ್ ಖಾನ್, ಸಲ್ಮಾನ್ ಖಾನ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿರುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಈ ಮೂವರಿಗೆ ಸ್ಥಾನ ಸಿಕ್ಕಿಲ್ಲ. ಅಷ್ಟೇ ಅಲ್ಲದೇ, ಇನ್ನೂ ಅನೇಕ ಸೆಲೆಬ್ರಿಟಿಗಳಿಗೂ ಆಹ್ವಾನ ಪತ್ರಿಕೆ ತಲುಪಿಲ್ಲ ಎಂದು ಸುದ್ದಿ ಹರಿದಾಡುತ್ತಿದೆ.
ಹಿಂದಿ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ಅವರನ್ನು ಆಹ್ವಾನಿಸಲಾಗಿದೆ. ಆದರೆ ಅವರ ಸೊಸೆ, ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ಗೆ ಆಹ್ವಾನ ನೀಡಿಲ್ಲ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಕರಣ್ ಜೋಹರ್, ಶಿಲ್ಪಾ ಶೆಟ್ಟಿ, ಸಂಜಯ್ ದತ್ ಮುಂತಾದ ಕಲಾವಿದರಿಗೂ ಆಹ್ವಾನ ತಲುಪಿಲ್ಲ.
ಅಕ್ಷಯ್ ಕುಮಾರ್, ರಜನಿಕಾಂತ್, ಆಯುಷ್ಮಾನ್ ಖುರಾನಾ, ಕಂಗನಾ ರಣಾವತ್, ಆಲಿಯಾ ಭಟ್, ರಣಬೀರ್ ಕಪೂರ್, ರಣದೀಪ್ ಹೂಡಾ, ಅನುಷ್ಕಾ ಶರ್ಮಾ, ರಜನಿಕಾಂತ್, ಅನುಪಮ್ ಖೇರ್, ಮಾಧುರಿ ದೀಕ್ಷಿತ್, ರಿಷಬ್ ಶೆಟ್ಟಿ, ಯಶ್, ಅಜಯ್ ದೇವಗನ್, ಪ್ರಭಾಸ್, ರಾಮ್ ಚರಣ್, ಸನ್ನಿ ಡಿಯೋಲ್, ಮೋಹನ್ಲಾಲ್, ಸಂಜಯ್ ಲೀಲಾ ಬನ್ಸಾಲಿ, ಚಿರಂಜೀವಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ಆಹ್ವಾನ ಪತ್ರಿಕೆ ತಲುಪಿರುವ ಬಗ್ಗೆ ವರದಿ ಆಗಿದೆ.