ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹು ನಿರೀಕ್ಷಿತ ಬೇಕಲ್ ಬೀಚ್ ಫೆಸ್ಟ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಸಂಜೆ ಅದ್ಧೂರಿಯ ಚಾಲನೆ ಸಿಗಲಿದೆ.
ಮುಂದಿನ ಹತ್ತು ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ಬೇಕಲ ಕರಾವಳಿ ಸಿಂಗರಿಸಿಕೊಂಡು ಮದುವಣಗಿತ್ತಿಯಂತೆ ಸಜ್ಜಾಗಿದೆ. ಕೇರಳ ವಿಧಾನಸಭಾ ಸ್ಪೀಕರ್ ಎ.ಎನ್ ಶಂಸೀರ್ ಇಂದು ಸಂಜೆ ಐದು ಗಂಟೆಗೆ ಈ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಸಿ.ಎಚ್. ಕುಞಂಬು ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ನು ಸಂಸದ, ಶಾಸಕರು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಜೊತೆಯಾಗಲಿದ್ದಾರೆ.
ಉತ್ಸವದಲ್ಲಿ ನಡೆಯುವ ಕಲಾ ಕಾರ್ಯಕ್ರಮಗಳಿಗೆ ಮಾತ್ರ ಉಚಿತ ಪ್ರವೇಶವಿರಲಿದೆ. ಉಳಿದಂತೆ ಹಿರಿಯರಿಗೆ ನೂರು ರೂ. ಹಾಗೂ ಮಕ್ಕಳಿಗೆ 25ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.