Sunday, January 25, 2026
Sunday, January 25, 2026
spot_img

ಸೇಡಿನ ಸಮರಕ್ಕೆ ಕ್ಷಣಗಣನೆ! ಭಾರತ-ಪಾಕಿಸ್ತಾನ ಅಂಡರ್-19 ಹೈ-ವೋಲ್ಟೇಜ್ ಕಾದಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ. ಅಂಡರ್-19 ವಿಶ್ವಕಪ್‌ನ ಸೂಪರ್-6 ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲು ಸಿದ್ಧವಾಗಿವೆ. ಈ ಹೈ-ವೋಲ್ಟೇಜ್ ಪಂದ್ಯವು ಫೆಬ್ರವರಿ 1 ರಂದು ಝಿಂಬಾಬ್ವೆಯ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.

ಭಾರತದ ಅಜೇಯ ಓಟ (ಗ್ರೂಪ್-ಬಿ)
ಟೀಮ್ ಇಂಡಿಯಾ ಈ ಬಾರಿಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಅಗ್ರಸ್ಥಾನ ಪಡೆದಿದೆ:

ಯುಎಸ್ಎ ವಿರುದ್ಧ: 6 ವಿಕೆಟ್‌ಗಳ ಭರ್ಜರಿ ಜಯ.

ಬಾಂಗ್ಲಾದೇಶ ವಿರುದ್ಧ: 18 ರನ್‌ಗಳ ರೋಚಕ ಗೆಲುವು.

ನ್ಯೂಜಿಲೆಂಡ್ ವಿರುದ್ಧ: 7 ವಿಕೆಟ್‌ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿ ಸೂಪರ್-6 ಹಂತಕ್ಕೇರಿದೆ.

ಪಾಕ್ ಪಡೆ ಮಿಶ್ರ ಫಲಿತಾಂಶದೊಂದಿಗೆ ಸೂಪರ್-6 ಹಂತ ತಲುಪಿದೆ:

ಇಂಗ್ಲೆಂಡ್ ವಿರುದ್ಧ 37 ರನ್‌ಗಳ ಸೋಲು ಕಂಡರೂ, ನಂತರ ಚೇತರಿಸಿಕೊಂಡ ಪಾಕ್ ತಂಡ ಸ್ಕಾಟ್ಲೆಂಡ್ ಮತ್ತು ಝಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಿ 4 ಅಂಕಗಳೊಂದಿಗೆ ಮುನ್ನಡೆದಿದೆ.

ಈ ಪಂದ್ಯವು ಭಾರತಕ್ಕೆ ಕೇವಲ ಜಯವಷ್ಟೇ ಅಲ್ಲ, ಸೇಡಿನ ಸಮರವೂ ಹೌದು. ಕಳೆದ 2025ರ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಭಾರತವನ್ನು 191 ರನ್‌ಗಳ ಭಾರಿ ಅಂತರದಿಂದ ಸೋಲಿಸಿತ್ತು. ಪಾಕ್ ನೀಡಿದ್ದ 347 ರನ್‌ಗಳ ಗುರಿಯನ್ನು ಬೆನ್ನಟ್ಟಲಾಗದೆ ಭಾರತ 156 ರನ್‌ಗಳಿಗೆ ಕುಸಿದಿತ್ತು. ಅಂದು ಅನುಭವಿಸಿದ ಮುಖಭಂಗಕ್ಕೆ ವಿಶ್ವಕಪ್ ವೇದಿಕೆಯಲ್ಲಿ ತಿರುಗೇಟು ನೀಡಲು ಭಾರತೀಯ ಯುವ ಪಡೆ ಹಪಹಪಿಸುತ್ತಿದೆ.

Must Read