ಟಿ20 ವಿಶ್ವಕಪ್‌ ಆರಂಭಕ್ಕೆ ಕ್ಷಣಗಣನೆ: ಒಂದೆಡೆ ಸೇರಿ ಸೆಲ್ಫಿಗೆ ಪೋಸ್ ಕೊಟ್ರು 16 ಕ್ಯಾಪ್ಟನ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಸಿಸಿ ಟಿ20 ವಿಶ್ವಕಪ್‌ 2022ಕ್ಕೆ ಆರಂಭಕ್ಕೆ ಇನ್ನು 24 ಗಂಟೆಗಳಷ್ಟೇ ಬಾಕಿ ಉಳಿದಿದೆ. ಅಕ್ಟೋಬರ್ 16ರಂದು ಅಧಿಕೃತ ಚಾಲನೆ ಸಿಗಲಿದ್ದು, ಇದರ ಮುನ್ನ 16 ತಂಡದ ನಾಯಕರು ಒಂದೆಡೆ ಸೇರಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಫೋಟೊಗಳನ್ನ ಪೋಸ್ಟ್ ಮಾಡಿದ್ದು, ಟಿ20 ವಿಶ್ವಕಪ್‌ನೊಂದಿಗೆ 16 ತಂಡಗಳ ನಾಯಕರು ಪೋಸ್ ನೀಡಿದ್ದಾರೆ.

ಟ್ರೋಫಿಯೊಂದಿಗಿನ ಫೋಟೋ ಜೊತೆಗೆ ಆತಿಥೇಯ ಆಸ್ಟ್ರೇಲಿಯಾ ತಂಡದ ನಾಯಕ ಆಯರೋನ್ ಫಿಂಚ್ ತೆಗೆದುಕೊಂಡಿರುವ ಸೆಲ್ಫಿಯನ್ನು ಕೂಡ ಪೋಸ್ಟ್‌ ಮಾಡಿದ್ದು ‘ಸೆಲ್ಫಿ ಟೈಂ’ ಎಂಬ ಶೀರ್ಷಿಕೆಯನ್ನು ನೀಡಿದೆ.

ಇದೇ ವೇಳೆಯಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಹುಟ್ಟುಹಬ್ಬ ಹಿನ್ನಲೆಯಲ್ಲಿ ಎಲ್ಲಾ ಕ್ರಿಕೆಟ್ ತಂಡದ ನಾಯಕರ ಎದುರು ಕೇಕ್ ಕತ್ತರಿಸಿ ಶುಭ ಕೋರಲಾಗಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 23ರಂದು ಮುಖಾಮುಖಿಯಾಗುವ ಮೂಲಕ ತಮ್ಮ ವಿಶ್ವಕಪ್‌ ಅಭಿಯಾನವನ್ನು ಆರಂಭಿಸಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!