ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ನಿಂದಬಾಂಗ್ಲಾದೇಶ ವೇಗದ ಬೌಲರ್ ಮುಸ್ತಾಫಿಝುರ್ ರೆಹಮಾನ್ ಹೊರ ನಡೆದಿದ್ದು, ಇದೀಗ ಅವರ ಸ್ಥಾನಕ್ಕೆ ಜಿಂಬಾಬ್ವೆ ವೇಗದ ಬ್ಲೆಸಿಂಗ್ ಮುಝರಬಾನಿಗೆ ಅವಕಾಶ ಒದಗಿ ಬಂದಿದೆ.ಕೋಲ್ಕತಾ ನೈಟ್ ರೈಡರ್ಸ್ ತಂಡ ಪರ ಆಡಲಿದ್ದಾರೆ.
ಈ ಕುರಿತು ಕೋಲ್ಕತಾ ಫ್ರಾಂಚೈಸಿ ಮಾಹಿತಿ ನೀಡಿದ್ದು, ಜಿಂಬಾಬ್ವೆ ವೇಗದ ಬೌಲರ್ ಬ್ಲೆಸಿಂಗ್ ಮುಝರಬಾನಿ ಅವರನ್ನು ಮುಂದಿನ 2026ರ ಸಾಲಿನ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ ತಂಡಕ್ಕೆ ಸೇರಿಸಿರುವುದಾಗಿ ಘೋಷಿಸಿದೆ. 6 ಅಡಿ 8 ಇಂಚು ಎತ್ತರದ ಈ ರೈಟ್-ಆರ್ಮ್ ವೇಗದ ಬೌಲರ್, ಟಿ20 ಫಾರ್ಮಾಟ್ನಲ್ಲಿ ಜಿಂಬಾಬ್ವೆ ತಂಡದ ಪ್ರಮುಖ ವೇಗದ ಬೌಲರ್ಗಳಲ್ಲಿ ಒಬ್ಬರಾಗಿದ್ದಾರೆ. ಅವರ ಬೌನ್ಸ್ ಮತ್ತು ನಿರ್ನಾಯಕ ಹಂತಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಬ್ಲೆಸಿಂಗ್ ಮುಝರಬಾನಿ ತಂಡಕ್ಕೆ ವಿಶೇಷ ಟಿ20 ಅನುಭವವನ್ನು ತರುತ್ತಾರೆ. ಅವರು 80ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 90ಕ್ಕೂ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ್ದಾರೆ. ವಿಶ್ವದಾದ್ಯಂತ ಫ್ರಾಂಚೈಸಿ ಲೀಗ್ಗಳು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರ ವೇಗ ಮತ್ತು ಸ್ಥಿರತೆಯು ಕೆಕೆಆರ್ ತಂಡದ ವೇಗದ ಬೌಲಿಂಗ್ ದಾಳಿಗೆ ಇನ್ನಷ್ಟು ಡೆಪ್ತ್ ತಂದುಕೊಡಲಿದೆ ಎಂದು ತಿಳಿಸಿದೆ.
ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಗೆ ಮುಝರಬಾನಿ ಅವರಿಂದ ಸಹಿ ಮಾಡಿಕೊಂಡಿದ್ದರು. ಇದೀಗ ಅವರು ಐಪಿಎಲ್ ಟೂರ್ನಿಯಲ್ಲಿ ಆಡಲು ಅವಕಾಶ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಪಿಎಸ್ಎಲ್ ಟೂರ್ನಿಯಿಂದ ಹೊರ ಬಂದಿದ್ದಾರೆ.



