ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎಲಾನ್ ಮಸ್ಕ್ ಮಾಲೀಕತ್ವದ ಎಕ್ಸ್ ಬಹುದೊಡ್ಡ ಬದಲಾವಣೆಗೆ ಮುಂದಾಗಿದ್ದು, ಅದರಂತೆ ಇನ್ಮುಂದೆ ನಿಮ್ಮ ಎಕ್ಸ್ ಖಾತೆಯಲ್ಲಿ ದೇಶದ ಲೇಬಲ್ ಕಡ್ಡಾಯವಾಗಿ ಇರಲಿದೆ.
ನಕಲಿ ಪ್ರೊಫೈಲ್‌ಗಳು ಹಾಗೂ ಬಾಟ್‌ಗಳನ್ನು ನಿಯಂತ್ರಿಸಲು ಎಕ್ಸ್ ಈ ಕ್ರಮ ಕೈಗೊಂಡಿದೆ. ಮುಂದೆ ಎಕ್ಸ್‌ನಲ್ಲಿ ರಚಿಸಲಾಗುವ ಪ್ರೊಫೈಲ್‌ಗಳು ಹಾಗೂ ಈಗಾಗಲೇ ಇರುವ ಪ್ರೊಫೈಲ್‌ಗಳಲ್ಲಿ ಇದು ಯಾವ ದೇಶದ ಎಕ್ಸ್ ಅಕೌಂಟ್ ಅನ್ನೋ ಮಾಹಿತಿ ಇರುವುದನ್ನು ಕಂಪನಿ ಕಡ್ಡಾಯ ಮಾಡಿದೆ.
ಎಲಾನ್ ಮಸ್ಕ್ ಅವರ X ವೇದಿಕೆ ಎಲ್ಲಾ ಯೂಸರ್‌ಗಳಿಗೆ ‘ಈ ಖಾತೆಯ ಬಗ್ಗೆ’ (ವಿಭಾಗದಲ್ಲಿ ದೇಶದ ಲೇಬಲ್‌ಗಳನ್ನು ಕಡ್ಡಾಯವಾಗಿ ದಾಖಲು ಮಾಡಲಿದೆ. ಇದನ್ನು IP ವಿಳಾಸಗಳು ಮತ್ತು ಪೋಸ್ಟಿಂಗ್ ಮಾದರಿಗಳ ಮೂಲಕ ನಿರ್ಧರಿಸಲಾಗುತ್ತದೆ, ಇದು ದೃಢೀಕರಣವನ್ನು ಹೆಚ್ಚಿಸಲು ಮತ್ತು ಬಾಟ್ ಮತ್ತು ವಿದೇಶಿ ಪ್ರಭಾವ ಚಟುವಟಿಕೆಗಳನ್ನು ಕಡಿಮೆ ಮಾಡುವ ಉದ್ದೇಶಕ್ಕಾಗಿ ಬಳಸಲಾಗುತ್ತದೆ.
ನವೆಂಬರ್ 18 ರಿಂದ 24 ಗಂಟೆಯ ಒಳಗಾಗಿ ಈ ವಿಶೇಷತೆಯು ಜಾರಿಗೆ ಬರಲಿದೆ. ನಿಯಂತ್ರಕ ನಿಯಮಗಳ ಕಾರಣದಿಂದಾಗಿ ಯುರೋಪಿಯನ್ ಯೂನಿಯನ್‌ನಲ್ಲಿರುವ ದೇಶವನ್ನು ಬಿಟ್ಟು ಮತ್ತೆಲ್ಲಾ ದೇಶಗಳಲ್ಲಿ ಇದು ಪ್ರದರ್ಶನವಾಗಲಿದೆ. ಯುರೋಪಿಯನ್ ಯೂನಿಯನ್ ಫ್ಲಾಗ್ ಫ್ರೊಫೈಲ್ ನಿಯಮದಿಂದ ಹೊರಗುಳಿಯುವ ನಿರ್ಧಾರ ಮಾಡಿದೆ.
ಹೆಚ್ಚಿನ ಯೂಸರ್‌ಗಳು ಮೋಸಗೊಳಿಸುವ ಖಾತೆಗಳ ಬಹಿರಂಗಪಡಿಸುವಿಕೆಯನ್ನು ಹೊಗಳಿದರೆ, ದಮನಕಾರಿ ಆಡಳಿತಗಳಲ್ಲಿನ ಗೌಪ್ಯತೆಯ ಅಪಾಯಗಳು ಮತ್ತು ಮುಕ್ತ ಮಾತಿನ ಮೇಲಿನ ಸಂಭಾವ್ಯ ಪರಿಣಾಮಗಳ ಬಗ್ಗೆ ಕಳವಳಗಳು ಉದ್ಭವಿಸುತ್ತವೆ ಎಂದು ಹೇಳಿದ್ದಾರೆ.
ನಿಮ್ಮ ಪ್ರೊಫೈಲ್ ಪೇಜ್‌ನಲ್ಲಿ ನೀವು ಯಾವ ದೇಶದವರು ಎನ್ನುವ ಮಾಹಿತಿ ನೀಡುವುದು ಮಾತ್ರವಲ್ಲದೆ, ಎಕ್ಸ್‌ಗೆ ಯಾವ ದಿನ ಯಾವ ಲೊಕೇಷನ್‌ನಿಂದ ಸೇರಿದ್ದೀರಿ ಅನ್ನೋ ಮಾಹಿತಿಯನ್ನೂ ನೀಡುತ್ತದೆ. ಅದರೊಂದಿಗೆ ಎಷ್ಟು ಬಾರಿ ಯೂಸರ್ ನೇಮ್ ಬದಲಾವಣೆ ಮಾಡಿದ್ದೀರಿ, ಯಾವ ದೇಶದ ಆಪ್ ಸ್ಟೋರ್‌ನಿಂದ ನೀವು ಕನೆಕ್ಟ್ ಆಗಿದ್ದೀರಿ ಅನ್ನೋ ಮಾಹಿತಿಯನ್ನೂ ನೀಡುತ್ತದೆ.
ಎಕ್ಸ್ ಈ ಕ್ರಮ ಕೈಗೊಂಡಿರುವ ಕಾರಣ ನಕಲಿ ಪ್ರೊಫೈಲ್‌ಗಳು ಹಾಗೂ ಟ್ರೋಲರ್‌ಗಳ ಮೇಲೆ ಕಡಿವಾಣ ಬೀರಲಿದೆ.

