ದೇಶದ ಪ್ರಪ್ರಥಮ ʻಗ್ರೀನ್ ಹೈಡ್ರೋಜನ್ ಎಲೆಕ್ಟ್ರೋಲೈಜರ್ ಗಿಗಾ ಫ್ಯಾಕ್ಟರಿʼ ಕರ್ನಾಟಕದಲ್ಲಿ ಉದ್ಘಾಟನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಒಮಿಯಂ ಕಂಪನಿಯಿಂದ ಸುಮಾರು 2,000 ಕೋಟಿ ರೂ. ಹೂಡಿಕೆಯಲ್ಲಿ ಹಸಿರು ಹೈಡ್ರೋಜನ್ ಎಲೆಕ್ಟ್ರೋಲೈಜರ್‌ಗಳಿಗಾಗಿ ದೇಶದ ಮೊದಲ ಗಿಗಾಫ್ಯಾಕ್ಟರಿಯನ್ನು ಶುಕ್ರವಾರ ದೊಡ್ಡಬಳ್ಳಾಪುರ ಬಳಿ ಉದ್ಘಾಟಿಸಲಾಯಿತು.

ಕೇಂದ್ರದ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್‌ ಜೋಶಿ ಈ ಘಟಕವನ್ನು ಉದ್ಘಾಟಿಸಿದರು. ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಉಪಸ್ಥಿತರಿದ್ದರು.

ಬಳಿಕ ಎಂ.ಬಿ.ಪಾಟೀಲ್ ಅವರು ವೈಶಿಷ್ಟ್ಯವನ್ನು ವಿವರಿಸಿದರು. ಸುಸ್ಥಿರ ಅಭಿವೃದ್ಧಿಯ ಪ್ರಮುಖ ಗುರಿಯಾಗಿ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಮೇಲೆ ಒತ್ತು ಕೊಟ್ಟಿದ್ದು, ಇದೊಂದು ಪ್ರಮುಖ ಗುರಿಯಾಗಿದೆ ಎಂದು ಶ್ಲಾಘಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!