February 17, 2026
Tuesday, February 17, 2026
spot_img

ಅಪಘಾತದಲ್ಲಿ ಮಗ ಸತ್ತುಹೋದ, ಈ ಬದುಕೇ ಬೇಡ ಎಂದ ಆತ್ಮಹತ್ಯೆಗೆ ಶರಣಾದ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಪಘಾತದಲ್ಲಿ ಮಗ ಮೃತಪಟ್ಟಿದ್ದಾನೆ. ಅವನನ್ನು ಬಿಟ್ಟರೆ ಬೇರೆ ಜೀವನ ಇಲ್ಲ ಎಂದು ತಂದೆ ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಛತ್ತೀಸ್‌ಗಢದ ರಾಯ್ಪುರದಲ್ಲಿ ಈ ಮನಕಲುಕುವ ಘಟನೆ ನಡೆದಿದೆ. ಕೃಷ್ಣಪಟೇಲ್‌ ಹಾಗೂ ರಮಾ ಬಾಯಿ ತಮ್ಮ ಮಗನನ್ನು ಇತ್ತೀಚೆಗಷ್ಟೇ ಕಳೆದುಕೊಂಡಿದ್ದರು. ಆತನಿಲ್ಲದ ಲೋಕ ಬೇಡ ಎಂದು ನಿರ್ಧರಿಸಿ ನಾಲ್ಕು ಪುಟಗಳ ಡೆತ್‌ನೋಟ್‌ ಹಾಗೂ ವಿಡಿಯೋ ಸಂದೇಶ ಮಾಡಿ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮಗ ಮೃತಪಟ್ಟಿದ್ದರಿಂದ ತಂದೆ-ತಾಯಿ ಇಬ್ಬರೂ ಮನನೊಂದಿದ್ದರು. ಆದಿತ್ಯ ದೇವಸ್ಥಾನದ ಕೆಲಸ ಮತ್ತು ಯಜ್ಞಕ್ಕೆ ಸಹಾಯ ಮಾಡಲು ಗ್ರಾಮದ ಪುರೋಹಿತರೊಂದಿಗೆ ಹೊರಗೆ ಹೋಗಿದ್ದ. ಪುತ್ರ ಮೊದಲು ಹೋಗಲು ಹಿಂಜರಿದಿದ್ದ. ಆದರೆ, ಆತನ ತಂದೆ, ‘ಇದು ದೇವರ ಕೆಲಸ.. ಹೋಗಿ ಬಾ’ ಎಂದು ಒತ್ತಾಯಿಸಿದ್ದರು. ಈ ವಿಚಾರವನ್ನು ನೆನೆದು, ನಾನು ತಪ್ಪು ಮಾಡಿದೆ ಅಂತ ತಂದೆ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !