ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಮ್ಯಾ ಅತಿಥಿ ಪಾತ್ರದಲ್ಲಿ ಕಂಬ್ಯಾಕ್ ಮಾಡಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗ್ತಿದೆ.
ಸಿನಿಮಾ ಟ್ರೇಲರ್ ಮೂಲಕ ಧೂಳೆಬ್ಬಿಸಿದ್ದು, ಮೋಹಕ ತಾರೆ ರಮ್ಯಾ ಅವರನ್ನು ಮತ್ತೆ ತೆರೆ ಮೇಲೆ ನೋಡೋದಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ರಮ್ಯಾ ಟ್ರೇಲರ್ ನೋಡಿ ಗರಂ ಆಗಿದ್ದು, ತಂಡದ ವಿರುದ್ಧ ಕೇಸ್ ಹೂಡಿದ್ದರು.
ಇದೀಗ ರಮ್ಯಾಗೆ ಗೆಲುವು ಸಿಕ್ಕಿದ್ದು, ರಮ್ಯಾ ಇರುವ ತುಣುಕುಗಳನ್ನು ತೆಗೆದುಹಾಕುವಂತೆ ಚಿತ್ರತಂಡಕ್ಕೆ ನ್ಯಾಯಾಲಯ ತಿಳಿಸಿದೆ. ನನ್ನ ವಿಡಿಯೋ ಕ್ಲಿಪ್‌ನ್ನು ಅನಧಿಕೃತವಾಗಿ ಬಳಸಲಾಗಿದೆ ಎಂದು ರಮ್ಯಾ ದಾವೆ ಸಲ್ಲಿಸಿದ್ದರು.ಬೆಂಗಳೂರಿನ ೮೩ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಹೆಗ್ಡೆ ಅವರು ಆದೇಶ ನೀಡಿದ್ದು, ಈ ಕೂಡಲೇ ಕ್ಲಿಪ್ ಡಿಲೀಟ್ ಮಾಡಬೇಕಿದೆ.
ಸಿನಿಮಾ ಹಾಗೂ ಟ್ರೇಲರ್‌ನಲ್ಲಿ ಕೆಲ ತುಣುಕುಗಳನ್ನು ಬಳಸಬೇಡಿ ಎಂದು ಚಿತ್ರತಂಡಕ್ಕೆ ಹೇಳಿದ್ದೆ. ಆದರೂ ಅದನ್ನು ಬಳಲಸಾಗಿದೆ. ಇದು ನಮ್ಮ ಆರ್ಟಿಸ್ಟಿಕ್ ಅಗ್ರೀಮೆಂಟ್ ಉಲ್ಲಂಘನೆಯಾಗಿದೆ ಎಂದು ರಮ್ಯಾ ಹೇಳಿದ್ದಾರೆ.