ಕೋವಿಡ್ ಬೂಸ್ಟರ್ ಡೋಸ್​ ಪ್ರಯೋಜನ ಶೂನ್ಯ: ಶೇಖರ್‌ ಮಾಂಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೋವಿಡ್ ಬೂಸ್ಟರ್ ಡೋಸ್​ ಅನ್ನು ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಜೀವಶಾಸ್ತ್ರಜ್ಞ ಶೇಖರ್ ಮಾಂಡೆ ಹೇಳಿದರು.

ಕೋವಿಡ್ ಬೂಸ್ಟರ್​ ಡೋಸ್​ಗಳ ಕುರಿತು ಇರುವ ವೈಜ್ಞಾನಿಕ ಪುರಾವೆಗಳು ದುರ್ಬಲವಾಗಿದ್ದು, ಇದನ್ನು​ ತೆಗೆದುಕೊಳ್ಳುವುದರಿಂದ ತುಂಬಾ ಸಹಾಯಕವಾಗುವುದಿಲ್ಲ ಎಂದು ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದ ಬಯೋಇನ್ಫರ್ಮ್ಯಾಟಿಕ್ಸ್ ಸೆಂಟರ್‌ನ ಪ್ರಾಧ್ಯಾಪಕ, ಜೀವಶಾಸ್ತ್ರಜ್ಞ ಶೇಖರ್ ಮಾಂಡೆ ತಿಳಿಸಿದ್ದಾರೆ. ಕೋವಿಡ್ ಪ್ರಕರಣಗಳ ಉಲ್ಬಣವು ಹೊಸ ರೂಪಾಂತರ ದಿಂದ ಉಂಟಾಗಿದೆ ಎಂದರು.

ನಮ್ಮ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತಿರಬಹುದು ಅಥವಾ ಕೊರೊನಾ ರೂಪಾಂತರಗೊಂಡಿರಬಹುದು ಅದೇನೇ ಇರಲಿ, ಹಿಂದಿನ ಅಲೆಗಳಲ್ಲಿದ್ದಷ್ಟು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಾಗಲಿ ಅಥವಾ ಸಾವುಗಳು ಹೆಚ್ಚಾಗುವುದಿಲ್ಲ. ಈ ಉಲ್ಬಣವು ಮೊದಲ ಅಥವಾ ವಿನಾಶಕಾರಿ ಎರಡನೇ (ಡೆಲ್ಟಾ) ಅಲೆಯಂತೆ ಆಗುವುದಿಲ್ಲ ಎಂದು ಅವರು ಹೇಳಿದರು.

ಸಾಮಾನ್ಯ ಮುನ್ನೆಚ್ಚರಿಕೆಗಳು ಒಂದೇ ಆಗಿವೆ ಮತ್ತು ಬೂಸ್ಟರ್ ಸ್ಥಿತಿಯನ್ನು ಲೆಕ್ಕಿಸದೆ ಎಲ್ಲರೂ ಮಾಸ್ಕ್, ಸಾಮಾಜಿಕ ಅಂತರ, ಜನದಟ್ಟಣೆಯ ಸ್ಥಳಗಳನ್ನು ತಪ್ಪಿಸುವ ಮೂಲಕ ಮತ್ತು ಕಾಪಾಡಿಕೊಳ್ಳಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!