ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ದೇಶದಲ್ಲಿ ಸದ್ದಿಲ್ಲದೆ ಕೋವಿಡ್ ವ್ಯಾಪಿಸುತ್ತಿದ್ದು, ಬುಧವಾರ ಬರೋಬ್ಬರಿ 1133 ಹೊಸ ಪ್ರಕರಣಗಳನ್ನು ದಾಖಲಿಸಿದೆ.
ಕಳೆದ ೨೪ ತಾಸುಗಳಲ್ಲಿ ಒಟ್ಟು 1,03,831 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,026ಕ್ಕೆ ಏರಿಕೆಯಾಗಿದೆ. ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ ಈಗ 5,30,813ಕ್ಕೆ ಏರಿಕೆಯಾಗಿದೆ.