ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ನ್ಯುಮೋನಿಯಾ ಕಾಯಿಲೆ ತಾಂಡವವಾಡುತ್ತಿದ್ದು, ಕಳೆದ ಮೂರು ವಾರಗಳಲ್ಲಿ ಅಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿ 200ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿವೆ.
ಈ ಬಗ್ಗೆ ಸರ್ಕಾರ ಅಧಿಕೃತ ಅಂಕಿಅಂಶ ಬಹಿರಂಗಗೊಳಿಸಿದ್ದು, ಈಗ ಕಾಣಿಸಿಕೊಂಡಿರುವ ತೀವ್ರ ಚಳಿಯ ವಾತಾವರಣ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತಿದೆ.
ಜ.1ರಿಂದ ಇದುವರೆಗೆ ಪಂಜಾಬ್ ಪ್ರಾಂತ್ಯದಲ್ಲಿ ಒಟ್ಟು 10,520 ನ್ಯುಮೋನಿಯಾ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 220 ಮಕ್ಕಳು ಮೃತಪಟ್ಟಿದ್ದು, ಅವರೆಲ್ಲರೂ ಐದು ವರ್ಷದೊಳಗಿನವರು ಎಂದು ಅಂಕಿಅಂಶಗಳು ಹೇಳಿವೆ. ಇನ್ನು ಪಂಜಾಬ್‌ನ ಪ್ರಾಂತೀಯ ರಾಜಧಾನಿ ಲಾಹೋರ್‌ನಲ್ಲಿ 47 ಮಕ್ಕಳು ಮೃತಪಟ್ಟಿವೆ. ಈ ಮೃತಪಟ್ಟ ಮಕ್ಕಳ ಪೈಕಿ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಎಂಬುದು ಗೊತ್ತಾಗಿದೆ. ಅಲ್ಲದೆ ಇವರ್‍ಯಾರೂ ನ್ಯುಮೋನಿಯಾ ಲಸಿಕೆ ಪಡೆದಿರಲಿಲ್ಲ ಎಂದು ಅಲ್ಲಿನ ಸ್ಥಳಿಯ ಸರ್ಕಾರ ಮಾಹಿತಿ ನೀಡಿದೆ.