ಹಲವು ವರುಷಗಳ ಕಾಲ ನಿರಾಕರಿಸಿದ್ದ ಸತ್ಯವನ್ನು ಕಡೆಗೂ ಒಪ್ಪಿಕೊಂಡ ರಣಹೇಡಿ ಪಾಕಿಸ್ತಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿರುವುದು ಹೌದು ಎಂದು ಖುದ್ದಾಗಿ ಒಪ್ಪಿಕೊಂಡಿದೆ. ಈ ಸತ್ಯ ಒಪ್ಪಿಕೊಳ್ಲಲು ಹಲವು ವರ್ಷಗಳ ಕಾಲ ನಿರಾಕರಿಸಿತ್ತು, ಆದರೆ ಈಗ ಅದರ ಉನ್ನತ ವಾಯುಪಡೆಯ ಅಧಿಕಾರಿಯೇ ಈ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನ ವಾಯುಪಡೆಯ ವಾಯು ವೈಸ್ ಮಾರ್ಷಲ್ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕ ಔರಂಗಜೇಬ್ ಅಹ್ಮದ್ ಪತ್ರಿಕಾಗೋಷ್ಠಿಯಲ್ಲಿ, ಪುಲ್ವಾಮಾ ದಾಳಿಯನ್ನು ‘ಯುದ್ಧತಂತ್ರದ ಪ್ರತಿಭೆ’ಗೆ ಒಂದು ಉದಾಹರಣೆ ಎಂದು ಹೇಳಿಕೊಂಡಿದ್ದಾರೆ.

ಈ ಹೇಳಿಕೆಯು ಪುಲ್ವಾಮಾ ದಾಳಿಯಲ್ಲಿ ಮಾತ್ರವಲ್ಲದೆ ಇತ್ತೀಚಿನ ಪಹಲ್ಗಾಮ್ ದಾಳಿಯಲ್ಲೂ ಪಾಕಿಸ್ತಾನದ ಪಾತ್ರದ ಬಗ್ಗೆ ಅನುಮಾನಗಳನ್ನು ದೃಢಪಡಿಸುತ್ತಿದೆ.

ಪಾಕಿಸ್ತಾನ ಸೇನೆಯ ಡಿಜಿ ಐಎಸ್‌ಪಿಆರ್ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಮತ್ತು ನೌಕಾಪಡೆಯ ವಕ್ತಾರರು ಔರಂಗಜೇಬ್ ಅಹ್ಮದ್ ಅವರೊಂದಿಗೆ ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಯಲ್ಲಿನ ಈ ಹೇಳಿಕೆಯು ಪಾಕಿಸ್ತಾನದ ವರ್ಚಸ್ಸಿಗೆ ದೊಡ್ಡ ಕಳಂಕವಾಗಿದ್ದು, ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಭಯೋತ್ಪಾದನೆಯನ್ನು ಬೆಂಬಲಿಸುವ ಪಾಕಿಸ್ತಾನದ ನೀತಿಯನ್ನು ಮುನ್ನೆಲೆಗೆ ತರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!