ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ರಣತಂತ್ರಗಳ ಚರ್ಚೆ ಅಂತಿಮ ಹಂತದಲ್ಲಿರುವ ಇಂಡಿಯಾ ಮೈತ್ರಿ ಕೂಟಕ್ಕೆ ಶಾಕ್ ಎದುರಾಗಿದೆ. ಒಂದೆಡೆ ಆಯ್ಕೆ ಕಲ ಪತ್ರಕರ್ತರ ಚರ್ಚೆಯಲ್ಲಿ ಪಾಲ್ಗೊಳ್ಳದಿರಲು ತೆಗೆದುಕೊಂಡ ನಿರ್ಧಾರಕ್ಕೆ ಕೆಲ ಪಕ್ಷಗಳು ವಿರೋಧ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಸಿಪಿಐ(ಎಂ) ಪಕ್ಷ ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ನಾವು ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿ ಹೋರಾಟ ಮಾಡುತ್ತೇವೆ ಎಂದಿದೆ.
ಇದರ ಜೊತೆಗೆ ಇದೀಗ ಸಿಪಿಐ(ಎಂ) ಇಂಡಿಯಾ ಮೈತ್ರಿ ಒಕ್ಕೂಟದ ಸಮನ್ವಯ ಸಮಿತಿ ಸಭೆಯಿಂದ ಹೊರಗುಳಿಯಲು ನಿರ್ಧರಿಸಿದೆ.
ಇಂಡಿಯಾ ಮೈತ್ರಿ ಒಕ್ಕೂಟದಲ್ಲಿರುವ 26ಕ್ಕೂ ಹೆಚ್ಚು ಪಕ್ಷಗಳ ಜೊತೆ ಸಮನ್ವಯ ಸಾಧಿಸಲು ಸಮನ್ವಯ ಸಮಿತಿ ರಚಿಸಲಾಗಿದೆ. ಆದರೆ ಈ ಸಮಿತಿಯಲ್ಲೇ ಭಿನ್ನಾಭಿಪ್ರಾಯ ಹೆಚ್ಚಿದೆ. ಕಾರಣ ಸೀಟು ಹಂಚಿಕೆ ವಿಚಾರದಲ್ಲಿ ಕೆಲ ರಾಜ್ಯದಲ್ಲಿ ಪ್ರಾಬಲ್ಯದ ಪಕ್ಷಗಳು ಯಾವುದೇ ಮೈತ್ರಿಗೆ ಒಪ್ಪಿಕೊಳ್ಳುತ್ತಿಲ್ಲ. ಖುದ್ದು ಸಿಪಿಐ(ಎಂ) ಕೂಡ ಸೀಟು ಹಂಚಿಕೆ ಸೂತ್ರವನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಸಮನ್ವಯ ಸಮಿತಿಯಿಂದಲೇ ಹೊರಬಂದಿದೆ.
ಕೇರಳದಲ್ಲಿ ಸಿಪಿಐ(ಎಂ) ಅಧಿಕಾರದಲ್ಲಿದೆ. ಮೈತ್ರಿ ಮಾಡಿಕೊಂಡರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದಲ್ಲಿ ಇರುವ ಒಂದು ರಾಜ್ಯವನ್ನೂ ಕಳೆದುಕೊಳ್ಳುವ ಭೀತಿ ಸಿಪಿಐ(ಎಂ) ಎದುರಾಗಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿ ವಿರುದ್ದ ಹೋರಾಡುತ್ತಿರುವ ಸಿಪಿಐ(ಎಂ) ಮುಂಬುರವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೇರುವ ವಿಶ್ವಾಸದಲ್ಲಿದೆ. ಹೀಗಾಗಿ ಲೋಕಸಭೆ ಚುನಾವಣೆಗಾಗಿ ಮಾಡಿಕೊಳ್ಳುವ ಮೈತ್ರಿಯಿಂದ ಸಿಪಿಐ(ಎಂ) ಕುರುಹು ಉಳಿದಿರುವ ಕೇರಳ ಹಾಗೂ ಬಂಗಾಳದಲ್ಲಿ ಹೆಸರೇ ಇಲ್ಲದಾಗಲಿದೆ ಅನ್ನೋ ಆತಂಕ ಸಿಪಿಐ(ಎಂ) ಕಾಡುತ್ತಿದೆ.