ಆಸಿನ್ ದಾಂಪತ್ಯ ಜೀವನದಲ್ಲಿ ಬಿರುಕು?: ಡಿವೋರ್ಸ್​ ವದಂತಿ ಕುರಿತು ನಟಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ದಿನಗಳಿಂದ ಬಹುಭಾಷಾ ನಟಿ ಆಸಿನ್ (Asin) ಅವರು ತಮ್ಮ ಪತಿ ಮೈಕ್ರೋಮ್ಯಾಕ್ಸ್ ಕೋ-ಫೌಂಡರ್ ಆಗಿರುವ ರಾಹುಲ್ ಶರ್ಮಾಗೆ (Rahul Sharma) ಡಿವೋರ್ಸ್ ನೀಡುತ್ತಿದ್ದಾರೆ ಎಂಬ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದು, ಇದೀಗ ಈ ವಿಚಾರ ಕುರಿತು ನಟಿ ಆಸಿನ್ ಸ್ಪಷ್ಟನೆ ನೀಡಿದ್ದಾರೆ.

ಹಬ್ಬಿರುವ ಸುದ್ದಿ ಶುದ್ಧ ಸುಳ್ಳು. ನಾವಿಬ್ಬರು ಚೆನ್ನಾಗಿದ್ದೀವಿ ಎಂದು ಆಸಿನ್ ಹೇಳಿದ್ದಾರೆ. ಆ ಮೂಲಕ ಗಾಳಿಸುದ್ದಿಗೆ ಆಸಿನ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ನಾವೀಗ ಬೇಸಿಗೆ ರಜೆ ಕಳೆಯುತ್ತಿದ್ದೇವೆ. ನಾನು, ನನ್ನ ಪತಿ ಅಕ್ಷರಶಃ ಅಕ್ಕ-ಪಕ್ಕ ಕೂತಿದ್ದೇವೆ. ಬ್ರೇಕ್ ಫಾಸ್ಟ್ ಸವಿಯುತ್ತಿದ್ದೇವೆ. ಈ ಮಧ್ಯೆ ಕಾಲ್ಪನಿಕ ಹಾಗೂ ತಲೆಬುಡವಿಲ್ಲದ ಆಧಾರರಹಿತ ಸುದ್ದಿಯೊಂದು ನಮ್ಮ ಕಣ್ಣಿಗೆ ಬಿತ್ತು. ಇದು ನಮ್ಮ ಮದುವೆ ದಿನಗಳನ್ನು ನೆನಪಿಸುತ್ತದೆ. ಮದುವೆ ಬಗ್ಗೆ ನಮ್ಮ ಕುಟುಂಬಸ್ಥರು ಅಂದು ಮನೆಯಲ್ಲಿ ಪ್ಲಾನ್ನಿಂಗ್ ಮಾಡುತ್ತಿದ್ದಾಗ ನಾವಿಬ್ಬರು ಬ್ರೇಕಪ್ ಮಾಡಿಕೊಂಡ್ವಿ ಎಂಬ ಸುದ್ದಿ ಹಬ್ಬಿತ್ತು. ಇದೀಗ ಈ ಡಿವೋರ್ಸ್ ವದಂತಿಯಿಂದ ನಮ್ಮ ಅದ್ಭುತವಾದ ರಜಾ ದಿನದಲ್ಲಿ 5 ನಿಮಿಷ ವ್ಯರ್ಥವಾಗಿದ್ದಕ್ಕೆ ನಿರಾಶೆಗೊಂಡಿದ್ದೇನೆ ಎಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ನಟಿ ಆಸಿನ್ ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಹಾಗೂ ಪತಿ ರಾಹುಲ್ ಶರ್ಮಾ ಸಂಬಂಧ ಗಟ್ಟಿಯಾಗಿದೆ ಅಂತಾ ಆಸಿನ್ ತಿಳಿಸಿದ್ದಾರೆ.

2015ರಲ್ಲಿ ರಿಲೀಸ್ ಆಗಿದ್ದ ಗಜನಿ ಚಿತ್ರದ ಆಮೀರ್ ಖಾನ್‌ಗೆ ಅಸಿನ್ ನಾಯಕಿಯಾಗಿದ್ದರು. ನಟ ಸೂರ್ಯ ಜೊತೆ ಕಾಣಿಸಿಕೊಂಡಿದ್ದ ಆಸಿನ್ ಅಭಿಮಾನಿಗಳ ಹೃದಯ ಗೆದ್ದರು. ಈ ಸಿನಿಮಾ ಬಳಿಕ ಆಸಿನ್ ಸೌತ್‌ನಿಂದ ಬಾಲಿವುಡ್‌ಗೆ ಜಿಗಿದರು. ಹಿಂದಿಯಲ್ಲಿ ಒಂದಿಷ್ಟು ಸಿನಿಮಾ ಮಾಡುವಾಗಲೇ ಆಸಿನ್ ಮದುವೆಯಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!