I.N.D.I.A ಮೈತ್ರಿಕೂಟದಲ್ಲಿ ಬಿರುಕು: ಅಚ್ಚರಿ ಮೂಡಿಸಿದ ಲಾಲು ನಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ ನ ಚಳಿಗಾಲದ ಅಧಿವೇಶನದಲ್ಲಿ ಅದಾನಿ ವಿಷಯವನ್ನೇ ಚರ್ಚಿಸುವ ಕಾಂಗ್ರೆಸ್ ನ ವರ್ತನೆಗೆ I.N.D.I.A ಮೈತ್ರಿಕೂಟದ ಇನ್ನಿತರ ರಾಜಕೀಯ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬಹಿರಂಗವಾಗಿಯೆ ಕಾಂಗ್ರೆಸ್ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರೆ, I.N.D.I.A ಕೂಟದ ನಾಯಕತ್ವ ಬದಲಾಗಬೇಕು ಎಂಬ ಕೂಗೂ ಕೇಳಿಬರತೊಡಗಿದೆ.

ಈ ನಡುವೆ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ I.N.D.I.A ನಾಯಕತ್ವದ ಬಗ್ಗೆ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ. ಇಂಡಿ ಮೈತ್ರಿಕೂಟ ಮುನ್ನಡೆಸಲು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಉತ್ತಮ ವ್ಯಕ್ತಿ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು I.N.D.I.A ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳಲು ಶರದ್ ಪವಾರ್, ಅಖಿಲೇಶ್ ಯಾದವ್ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿದ್ದರು.

ಮಮತಾ ಬ್ಯಾನರ್ಜಿಗೆ I.N.D.I.A ಮೈತ್ರಿಕೂಟದ ನಾಯಕತ್ವ ಸಿಗಬೇಕು ಎಂದು ಮಾಧ್ಯಮಗಳಿಗೆ ಪಾಟ್ನಾದಲ್ಲಿ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರ ಈ ಹೇಳಿಕೆ ರಾಹುಲ್ ಗಾಂಧಿಗೆ ಹಿನ್ನೆಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!