Monday, November 3, 2025

Snack | ಕ್ರಿಸ್ಪಿ & ಸ್ಪೈಸಿ ಸ್ನಾಕ್ ತಿನ್ನೋಕೆ ಆಸೆಯಾಗಿದ್ಯಾ? ಹಾಗಿದ್ರೆ ಆಲೂ ಫ್ರೈ ರೆಸಿಪಿ ಟ್ರೈ ಮಾಡ್ಲೇಬೇಕು

ಸಂಜೆಯ ಸಮಯಕ್ಕೆ ಚಹಾದ ಜೊತೆ ಕ್ರಿಸ್ಪಿ ಸ್ನ್ಯಾಕ್ ಬೇಕೆಂದರೆ ಆಲೂ ಫ್ರೈ ಒಂದು ಸೂಪರ್ ಆಯ್ಕೆ. ಇದು ಮನೆಯಲ್ಲೇ ತಯಾರಿಸಬಹುದಾದ ಸಿಂಪಲ್ ಮತ್ತು ರುಚಿಯಾದ ಪಕೋಡಾ ಟೈಪ್ ಸ್ನ್ಯಾಕ್. ಹೊರಗೆ ಕುರುಕುರು, ಒಳಗೆ ಮೃದುವಾಗಿರುವ ಈ ಆಲೂ ಸ್ಟೈಲಿ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ.

ಬೇಕಾಗುವ ಸಾಮಗ್ರಿಗಳು:

ಆಲೂಗಡ್ಡೆ – 3 ಮಧ್ಯಮ ಗಾತ್ರದ್ದು
ಅಕ್ಕಿ ಹಿಟ್ಟು – 2 ಟೇಬಲ್‌ಸ್ಪೂನ್‌
ಕಡಲೆ ಹಿಟ್ಟು – 3 ಟೇಬಲ್‌ಸ್ಪೂನ್‌
ಮೆಣಸಿನ ಪುಡಿ – 1 ಟೀ ಸ್ಪೂನ್‌
ಹಸಿಮೆಣಸು ಪೇಸ್ಟ್‌ – 1 ಟೀ ಸ್ಪೂನ್‌
ಹಿಂಗು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – ಕರಿಯಲು

ಮಾಡುವ ವಿಧಾನ:

ಮೊದಲು ಆಲೂಗಡ್ಡೆ ತುಂಡುಗಳನ್ನು ನೀರಿನಲ್ಲಿ ತೊಳೆದು ಬೇಯಿಸಿ ಇಡಿ. ಒಂದು ಬಟ್ಟಲಿನಲ್ಲಿ ಬೆಸನ್‌, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಹಸಿಮೆಣಸು ಪೇಸ್ಟ್‌, ಉಪ್ಪು, ಹಿಂಗು ಮತ್ತು ಸ್ವಲ್ಪ ನೀರು ಸೇರಿಸಿ ಸಣ್ಣ ದಪ್ಪ ಹದದ ಪೇಸ್ಟ್‌ ತಯಾರಿಸಿ.

ಆ ಪೇಸ್ಟ್‌ಗೆ ಆಲೂ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಎಣ್ಣೆ ಬಿಸಿ ಮಾಡಿ, ಆಲೂ ತುಂಡುಗಳನ್ನು ಒಂದೊಂದಾಗಿ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಬಿಸಿ ಬಿಸಿ ಆಲೂ ಫ್ರೈಯನ್ನು ಟೊಮ್ಯಾಟೊ ಸಾಸ್ ಅಥವಾ ಮಿಂಟ್ ಚಟ್ನಿಯ ಜೊತೆ ಸರ್ವ್ ಮಾಡಿ.

error: Content is protected !!