ಬ್ಯಾಂಕ್, ಫೈನಾನ್ಸ್ ಗಳಿಗೆ ಕನ್ನ: 2.20 ಲಕ್ಷ ರೂ. ಸಹಿತ ಮೂವರು ಪೊಲೀಸ್ ಬಲೆಗೆ

ಹೊಸದಿಗಂತ, ವಿಜಯಪುರ:

ವಿಜಯಪುರ ಜಿಲ್ಲೆಯಲ್ಲಿ ನಡೆದ ಬ್ಯಾಂಕ್ ಮತ್ತು ಪೈನಾನ್ಸ್ ಗಳಲ್ಲಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 2.20 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಸಿಂದಗಿ ಪಟ್ಟಣದ ಗೋಲಿಬಾರ ಮಡ್ಡಿ ಓಣಿಯ ಪ್ರಭು ಶಿವಪ್ಪ ಹಲಗಿ (32), ಅನಿಲ ಸುರೇಶ ನಾಯ್ಕೋಡಿ (32) ಹಾಗೂ ಬಸವರಾಜ ಲಕ್ಷ್ಮಣ ಮಾದರ (28) ಎಂದು ಗುರುತಿಸಲಾಗಿದೆ.

ಸಿಂದಗಿ ಪಟ್ಟಣದ ಅನ್ನಪೂರ್ಣ ಫೈನಾನ್ಸ್, ಇಂಡಿಯ ಪಿಕೆಪಿಎಸ್ ಬ್ಯಾಂಕ್ ನಲ್ಲಿ ನಡೆದ ಕಳವು, ಸಿಂದಗಿಯ ಎಲ್ ಆ್ಯಂಡ್ ಟಿ ಫೈನಾನ್ಸ್ ನಲ್ಲಿ ನಡೆದ ಕಳವಿಗೆ ಯತ್ನ ಸೇರಿ ಒಟ್ಟು 3 ಪ್ರಕರಣಗಳಲ್ಲಿ ಬಂಧಿತರು ಆರೋಪಿಗಳಾಗಿದ್ದಾರೆ.

ಸಿಂದಗಿ ಠಾಣೆ ಪೊಲೀಸರು ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!