Monday, January 12, 2026

ಕದನ ವಿರಾಮದ ಕ್ರೆಡಿಟ್ ವಾರ್: ಅಮೆರಿಕ ಬೆನ್ನಲ್ಲೇ ಈಗ ಚೀನಾ ಜಪ ಮಾಡುತ್ತಿರುವ ಪಾಕಿಸ್ತಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಿದವರು ಯಾರು? ಈ ಪ್ರಶ್ನೆಗೆ ಈಗ ಜಾಗತಿಕ ಮಟ್ಟದಲ್ಲಿ ಹೊಸ ತಿರುವು ಸಿಕ್ಕಿದೆ. ಈವರೆಗೆ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಈ ಕೀರ್ತಿಯನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಈಗ ಚೀನಾ ಕೂಡ ನಾವೇ ಶಾಂತಿ ಸ್ಥಾಪಕರು ಎಂದು ರಂಗಪ್ರವೇಶ ಮಾಡಿದೆ. ವಿಶೇಷವೆಂದರೆ, ಪಾಕಿಸ್ತಾನ ಈಗ ಚೀನಾದ ಈ ವಾದಕ್ಕೆ ಧ್ವನಿಗೂಡಿಸುತ್ತಿದೆ.

ಇತ್ತೀಚೆಗೆ ಚೀನಾ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಮೇ 6 ರಿಂದ 10ರ ವರೆಗೆ ನಡೆದ ‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿ ತಾನು ಭಾರತ ಮತ್ತು ಪಾಕಿಸ್ತಾನದೊಂದಿಗೆ ನಿರಂತರ ರಾಜತಾಂತ್ರಿಕ ಸಂಪರ್ಕದಲ್ಲಿತ್ತು. ಈ ಮೂಲಕ ಯುದ್ಧದ ಭೀತಿಯನ್ನು ತಪ್ಪಿಸಿ ಶಾಂತಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ಚೀನಾ ಹೇಳಿಕೊಂಡಿದೆ.

ಇದಕ್ಕೆ ಪುಷ್ಠಿ ನೀಡಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ತಾಹಿರ್ ಅಂದ್ರಾಬಿ, “ಆ ನಿರ್ಣಾಯಕ 3-4 ದಿನಗಳಲ್ಲಿ ಚೀನಾದ ನಾಯಕರು ನಮ್ಮೊಂದಿಗೆ ಮತ್ತು ಭಾರತದ ನಾಯಕರೊಂದಿಗೆ ಸಂಪರ್ಕದಲ್ಲಿದ್ದರು. ಅವರ ರಾಜತಾಂತ್ರಿಕ ಮಧ್ಯಸ್ಥಿಕೆಯೇ ಶಾಂತಿಗೆ ಕಾರಣವಾಯಿತು” ಎಂದು ಸಮರ್ಥಿಸಿಕೊಂಡಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!