ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ತಂಡವು ಹೈದರಾಬಾದ್ ಟೆಸ್ಟ್‌ನಲ್ಲಿ ಸೋತಿದ್ದು ಈಗ ಮುಗಿದ ಅದ್ಯಾಯ. ಆ ಮುಖಭಂಗವನ್ನು ಮರೀಬೇಕು ಈ ಸರಣಿಯನ್ನ ಟೀಮ್ ಇಂಡಿಯಾ ಗೆಲ್ಲಬೇಕು. ಆಂಗ್ಲರ ತಂಡ ಮಣಿಸಿ ಟ್ರೋಫಿ ಗೆದ್ದರೆ ಭಾರತ ತಂಡದ ಲೆಕ್ಕಾಚಾರವೂ ಬದಲಾಗಬೇಕಿದೆ. ಯಾಕಂದರೆ ನಮ್ಮ ಶಕ್ತಿಯೇ ನಮ್ಮ ದೌರ್ಬಲ್ಯ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಅನಿರೀಕ್ಷಿತ ಅವಘಡ ಸಂಭವಿಸಿದೆ. ರೋಹಿತ್ ಪಡೆ ಮೊದಲ ಮೂರು ದಿನ ಪ್ರಾಬಲ್ಯ ಮೆರೆದರೂ ನಾಲ್ಕನೇ ದಿನ ಸೋಲಿನ ಮುಖಭಂಗ ಅನುಭವಿಸಿದರು. 231 ರನ್‌ಗಳ ಸಾಧಾರಣ ಗುರಿಯನ್ನು ಸಾಧಿಸಲಾಗಲಿಲ್ಲ ಮತ್ತು ಅವರು ಇಂಗ್ಲೆಂಡ್ ವಿರುದ್ಧ ಮಂಡಿಯೂರಿದರು.
ಹೈದರಾಬಾದ್ ಟೆಸ್ಟ್‌ನಲ್ಲಿ ಭಾರತ ತಂಡ ತಾವೇ ತೋಡಿದ ಹಳ್ಳಕ್ಕೆ ಟೀಮ್ ಇಂಡಿಯನ್ಸ್ ಬಿದ್ದಿದ್ದು ಸದ್ಯ ಓಪನ್ ಸೀಕ್ರೆಟ್. ನಾವೇ ಸ್ಪಿನ್ ರಾಜರು ಎಂಬ ಭ್ರಮೆಯಲ್ಲಿ ಟೀಂ ಇಂಡಿಯಾ ಸ್ಪಿನ್ ಟ್ರ್ಯಾಕ್ ರೆಡಿ ಮಾಡಿತ್ತು, ನಮ್ಮ ಮುಂದೆ ಯಾರೂ ಇರಲಿಲ್ಲ. ಅದು ಈಡೇರಿದ್ದು ನಿಜ. ಕೊನೆಗೆ ಈ ಈ ಖೆಡ್ಡಾಗೆ ಬಿದ್ದು ಮುಖಭಂಗ ಅನುಭವಿಸಿದ್ದೂ ಅಷ್ಟೇ ಸತ್ಯ.
ತವರಿನಲ್ಲಿ ಭಾರತ ತಂಡದ ಗೆಲುವಿಗೆ ಸ್ಪಿನ್ ಧ್ಯೇಯವಾಗಿದೆ. ಇದು ಭಾರತ ತಂಡದ ಬಹುಕಾಲದ ಶಕ್ತಿಯಾಗಿತ್ತು. ಈ ಶಕ್ತಿ ಈಗ ದೌರ್ಬಲ್ಯವಾಗುತ್ತದೆ. ಹೈದ್ರಾಬಾದ್ ಟೆಸ್ಟ್ ಅತ್ಯುತ್ತಮ ಉದಾಹರಣೆಯಾಗಿದೆ. ಸ್ಪಿನ್ನಿಂಗ್ ಟ್ರ್ಯಾಕ್‌ನಲ್ಲಿ ಭಾರತ ತಂಡವು ಟಾಮ್ ಹಾರ್ಟ್ಲಿ ವಿರುದ್ಧ ಸಂಪೂರ್ಣವಾಗಿ ಸೋತಿತು.
ಇಂಗ್ಲೆಂಡ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಪವರ್ ಸ್ಪಿನ್ ನಂತಹ ಸ್ಪಿನ್ ವೈವಿಧ್ಯದೊಂದಿಗೆ ಆಡುವುದನ್ನು ಮುಂದುವರಿಸಿದರೆ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತಾಗುತ್ತೆ. ಹೈದ್ರಾಬಾದ್ನ ಸ್ಪಿನ್ ಟ್ರ್ಯಾಕ್‌ನಲ್ಲಿ ಟೀಮ್ ಇಂಡಿಯಾ ಮಕಾಡೆ ಮಲಗಿರೋದಕ್ಕೆ ನಾವು ಈ ಮಾತನ್ನ ಹೇಳ್ತಿಲ್ಲ. 2011ರಿಂದ ಈವರೆಗಿನ ಟೀಮ್ ಇಂಡಿಯಾದ ಟ್ರ್ಯಾಕ್ ರೆಕಾರ್ಡೆ ಈ ಕಥೆಯನ್ನ ಹೇಳ್ತಿದೆ.