ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕರಾಂಪೂರದಲ್ಲಿರುವ ಐತಿಹಾಸಿಕ ಮತ್ತು ಪವಿತ್ರ ಧಾರ್ಮಿಕ ತಾಣವಾಗಿರುವ ಅಂಜನಾದ್ರಿ ದೇಗುಲಕ್ಕೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ದೆಹಲಿ ಮೂಲದ ಇಶಾಂತ್ ಶರ್ಮಾ ಭೇಟಿ ನೀಡಿ, ಪವನಸುತನ ದರುಶನ ಪಡೆದರು.
ಜನಸಾಮಾನ್ಯರಂತೆ ಆಗಮಿಸಿದ್ದ ಟೀಂ ಇಂಡಿಯಾ ಮಾಜಿ ವೇಗಿ ಇಶಾಂತ್ ಶರ್ಮಾ, ದೆಹಲಿಯಿಂದ ತಮ್ಮೊಂದಿಗೆ ಬಂದಿದ್ದ ಸ್ನೇಹಿತನೊಂದಿಗೆ ಪಾದಗಟ್ಟೆಯಿಂದ 575 ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲೆ ಹೋಗಿ ಅಂಜನಾದ್ರಿ ಹನುಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ಬಗ್ಗೆ ಮಾತನಾಡಿದ ಇಶಾಂತ್ ಶರ್ಮಾ, ದೇವಸ್ಥಾನ ತುಂಬಾ ಪ್ರಶಾಂತವಾದ ಪ್ರದೇಶದಲ್ಲಿದೆ. ಮನಸ್ಸಿಗೆ ತುಂಬಾ ಹಿಡಿಸಿದೆ. ಮುಂದೆ ಮತ್ತೊಮ್ಮೆ ಕುಟುಂಬ ಸಮೇತ ದೇವಸ್ಥಾನಕ್ಕೆ ಬರುವುದಾಗಿ ಹೇಳಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗೆ ಗುಡ್ ಬೈ ಹೇಳಿರುವ ಇಶಾಂತ್, ದೆಹಲಿ ಪರವಾಗಿ ಐಪಿಎಲ್ ಪಂದ್ಯಾವಳಿ ಆಡುತ್ತಿದ್ದಾರೆ.

