September 27, 2026
Sunday, September 27, 2026
spot_img

ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದ ಬೆಳಂಬಾರ ಸುಗ್ಗಿ ಆರಂಭ, ಮಾರ್ಚ್‌ 3ರಂದು ಕಚೇರಿಗೆ

ಹೊಸದಿಗಂತ ವರದಿ ಅಂಕೋಲಾ :

ರಾಜ್ಯದಲ್ಲಿಯೆ ಪ್ರಸಿದ್ಧಿ ಪಡೆದ ಬೆಳಂಬಾರ ಸುಗ್ಗಿ ನಿನ್ನೆ ಬೆಳಂಬಾರ ಗೌಡರ ಮನೆಯಲ್ಲಿ ” ಬಂದಿ” ಹಾಕುವ ಮೂಲಕ ಆರಂಭವಾಗಿದ್ದು ಆರೇಳು ದಿನಗಳ ಸಂಭ್ರಮಾಚರಣೆಯಲ್ಲಿ ಮಿರಾಶಿ ಜಾಗರ ಮುಗಿಸಿ ಮಾರ್ಚ್ 3 ರಂದು ಹೋಳಿ ಹುಣ್ಣಿಮೆಯ ದಿನ ಸುಗ್ಗಿ ಕಚೇರಿಗೆ ಬರುತ್ತದೆ.

ಅಂದು ತಾಲೂಕಿನ ಮುಖ್ಯ ಬೀದಿಯಲ್ಲಿ ಸಹಸ್ರಾರು ಸಂಖ್ಯೆಯ ಕಿಕ್ಕಿರಿದ ಜನರ ಮಧ್ಯೆ ನೂರಾರು ಹಗರಣಗಳೊಂದಿಗೆ ಸುಗ್ಗಿ ತಾಲ್ಲೂಕು ಕಚೇರಿಯಲ್ಲಿ ಸ್ವಾತಂತ್ರ್ಯ ಪೂರ್ವ ಬ್ರಿಟಿಷ್ ಅಮಲ್ದಾರ ಕಾಲದಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದ “ಕಚೇರಿ ಗೌರವ ತಸ್ತಿಕ್ ಹಕ್ಕು” ಸ್ವೀಕರಿಸಲು ಬರುತ್ತದೆ.

ಅಂದಿನ ದಿನ ಪ್ರತಿ ವರ್ಷದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬೇಕೆಂದು ಊರ ಗೌಡರಾದ ಷಣ್ಮುಖ ಗೌಡ ಮತ್ತು ಬುದವಂತ ಕೊಲಕಾರ ಹತ್ತು ಮಂದಿಯನ್ನೊಳಗೊಂಡ ಬೆಳಂಬಾರ ಸುಗ್ಗಿ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Must Read