ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮಯಾಂಕ್ ಅಗರ್ವಾಲ್ ಮತ್ತು ಅವರ ಪತ್ನಿ ಆಶಿತಾ ಸೂದ್ ಅವರು ಗಂಡು ಮಗುವಿನ ಪೋಷಕರಾಗಿದ್ದಾರೆ. ದಂಪತಿಗಳು ತಮ್ಮ ಮಗನಿಗೆ ಆಯಾಂಶು ಎಂದು ಹೆಸರಿಸಿದ್ದಾರೆ ಎಂದು ಅವರು ಘೋಷಿಸಿದರು.
ಕರ್ನಾಟಕ ಕ್ರಿಕೆಟ್ ತಂಡದ ಪರ ಆಡುತ್ತಿರುವ ಅಂತರಾಷ್ಟ್ರೀಯ ಕ್ರಿಕೆಟಿಗ ಮಯಾಂಕ್ ಭಾನುವಾರ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಘೋಷಣೆ ಮಾಡಿದ್ದಾರೆ.
“ನಮ್ಮ ಹೃದಯ ಕೃತಜ್ಞತೆಯಿಂದ ತುಂಬಿದೆ, ನಾವು ಆಯನ್ಶ್ ಅನ್ನು ಪರಿಚಯಿಸುತ್ತೇವೆ. ಅವನು ನಮ್ಮ ಪಾಲಿನ ಮೊದಲ ಬೆಳಕಿನ ಕಿರಣ ಮತ್ತು ದೇವರ ಉಡುಗೊರೆಯಾಗಿದ್ದಾನೆ” ಎಂದು ಮಯಾಂಕ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ, ಕೆಎಸ್ ಭರತ್, ಜಯಂತ್ ಯಾದವ್, ಅಜಿಂಕ್ಯ ರಹಾನೆ, ಸುನೀಲ್ ಶೆಟ್ಟಿ ಸೇರಿದಂತೆ ಹಲವಾರು ಖ್ಯಾತನಾಮರು ಶುಭಾಶಯ ಕೋರಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ