ಮಹಾರಾಷ್ಟ್ರದ ಬಳಿಕ ಬಿಹಾರದಲ್ಲಿ ಬಂಡಾಯದ ಕೂಗು?: ವಿಭಜನೆಯ ಅಂಚಿನಲ್ಲಿ ಸಿಎಂ ನಿತೀಶ್ ಪಾರ್ಟಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಹಾರಾಷ್ಟ್ರದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದಲ್ಲಿ ಉಂಟಾದ ಬಿರುಕು ಮುಂದಿನ ದಿನಗಳಲ್ಲಿ ಬಿಹಾರದಲ್ಲಿ ಕೂಡ ಉಂಟಾಗಲಿದೆ ಎಂದು ಬಿಜೆಪಿಯ ಸುಶೀಲ್ ಮೋದಿ (Sushil Modi) ಹೇಳಿದ್ದಾರೆ.

ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ (JDU) ಪಕ್ಷದ ಹಲವಾರು ಸಂಸದರು ಮತ್ತು ಶಾಸಕರು ಬಿಜೆಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದು ಈ ಮೂಲಕ ನಿತೀಶ್ ಪಕ್ಷವು ವಿಭಜನೆಯ ಅಂಚಿನಲ್ಲಿದೆ ಎಂದು ಸುಶೀಲ್ ಮೋದಿ ಹೇಳಿದ್ದಾರೆ.

‘ಜೆಡಿಯು ಪಕ್ಷದಲ್ಲಿ ವಿಭಜನೆಯ ನಿರೀಕ್ಷೆಗಳನ್ನು ಎದುರಿಸುತ್ತಿದೆ, ಮುಂಬರುವ ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ಜೆಡಿಯು ಬಂಡಾಯಗಾರರನ್ನು ಒಪ್ಪಿಕೊಳ್ಳುವ ಬಗ್ಗೆ ಪಕ್ಷ ಇನ್ನೂ ನಿರ್ಧರಿಸಿಲ್ಲ ಇದು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಆದರೆ, ನಿತೀಶ್ ಕುಮಾರ್ ಅವರಿಗೆ ಬಿಜೆಪಿ ಬಾಗಿಲು ಮುಚ್ಚಿದೆ ಎಂದು ಹೇಳಿದ್ದಾರೆ.

ನಿತೀಶ್ ಕುಮಾರ್ ಬಿಜೆಪಿಗೆ ಬೆನ್ನಿಗೆ ಚೂರಿಹಾಕಿದ ರೀತಿಗೆ ಜೆಡಿಯು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ . ಜೊತೆಗೆ ನಿತೀಶ್ ಕುಮಾರ್ ಅವರು ತೇಜಸ್ವಿ ಯಾದವ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದಾಗಿನಿಂದ ಪಕ್ಷದ ಭವಿಷ್ಯವನ್ನು ಕತ್ತಲೆಯಲ್ಲಿ ನೋಡುತ್ತಿದ್ದಾರೆ ಎಂದರು.

ಅಜಿತ್ ಪವಾರ್ ಬಂಡಾಯ ನಂತರ ಜೆಡಿಯು ಸಂಸದರು ಮತ್ತು ಶಾಸಕರೊಂದಿಗೆ ನಿತೀಶ್ ಕುಮಾರ್ ಅವರು ಒಬ್ಬೊಬ್ಬರನ್ನು ಭೇಟಿಯಾಗುವ ಸಭೆಗಳನ್ನು ಉಲ್ಲೇಖಿಸಿದ ಮೋದಿ, ಅವರು ಇತರ ಪಕ್ಷಗಳಿಗೆ ಬದಲಾಗುತ್ತಾರೆ ಎಂಬ ಭಯದಿಂದಾಗಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗುತ್ತಿದ್ದಾರೆ ಎಂದು ಹೇಳಿದರು.

ಸುಶೀಲ್ ಮೋದಿ ಅವರ ಹೇಳಿಕೆಯನ್ನು ಜೆಡಿಯು ತಳ್ಳಿಹಾಕಿದೆ. ಸುಶೀಲ್ ಮೋದಿ ಮೂರ್ಖರ ಸ್ವರ್ಗದಲ್ಲಿ ಬದುಕಲಿ, ಜೆಡಿಯು ಅಖಂಡವಾಗಿದೆ ಎಂದು ನಿತೀಶ್ ಕುಮಾರ್ ಅವರ ಆಪ್ತ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!