ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ನಿಂದಾಗಿ ರಾಜಕೀಯದಲ್ಲಿ ನಂಬಿಕೆಯ ಸಮಸ್ಯೆ ಹೆಚ್ಚಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಆರೋಪಿಸಿದ್ದಾರೆ.
ರಾಜಸ್ಥಾನದ ರಾಜಸಮಂದ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಜಕೀಯ ನಾಯಕರ ಮಾತು ಮತ್ತು ನಡೆಗಳಲ್ಲಿನ ವ್ಯತ್ಯಾಸದಿಂದಾಗಿ, ಭಾರತದ ರಾಜಕೀಯ ಮತ್ತು ನಾಯಕರ ಮೇಲಿನ ಸಾರ್ವಜನಿಕರ ನಂಬಿಕೆ ಕ್ರಮೇಣ ಕುಸಿಯುತ್ತಿದೆ, ಕಾಂಗ್ರೆಸ್ನಿಂದಾಗಿ ಭಾರತೀಯ ರಾಜಕೀಯದಲ್ಲಿನ ನಂಬಿಕೆಯ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ದೇಶದ ರಾಜಕೀಯದಲ್ಲಿನ ನಂಬಿಕೆಯ ಬಿಕ್ಕಟ್ಟನ್ನು ಸವಾಲಾಗಿ ತೆಗೆದುಕೊಂಡಿದೆ. 2018ರ ವಿಧಾನಸಭಾ ಚುನಾವಣೆಗೂ ಮುನ್ನ ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ನೀಡಿದ ಭರವಸೆ ಈಡೇರಿಸಲಾಗಿದೆಯೇ ಎಂಬುದು ಎಲ್ಲರಿಗೂ ಗೊತ್ತಿದೆ. ಯಾವುದೇ ವ್ಯಕ್ತಿಯಾಗಲಿ, ಸಂಘಟನೆಯಾಗಲಿ ಪ್ರತಿಯೊಬ್ಬರು ತಾವು ನೀಡುವ ಭರವಸೆಗಳ ಈಡೇರಿಸಬೇಕು ಎಂದು ಸಿಂಗ್ ಹೇಳಿದರು.