ರಾಷ್ಟ್ರ ಲಾಂಛನದ ಕುರಿತು ಟೀಕೆ: ಪ್ರತಿಪಕ್ಷಗಳಿಗೆ ಖಡಕ್​ ತಿರುಗೇಟು ನೀಡಿದ ನಟ ಅನುಪಮ್​ ಖೇರ್​

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೂತನ ಸಂಸತ್​ ಭವನದ ಮೇಲೆ ಇತ್ತೀಚೆಗೆ ಪ್ರಧಾನಿ ಮೋದಿ ಅವರಿಂದ ಅನಾವರಣಗೊಂಡ ರಾಷ್ಟ್ರ ಲಾಂಛನದ ಕುರಿತ ಪ್ರತಿಪಕ್ಷಗಳ ಟೀಕೆಗಳಿಗೆ ಬಾಲಿವುಡ್​ ಹಿರಿಯ ನಟ ಅನುಪಮ್​ ಖೇರ್​ ಖಡಕ್​ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅನುಪಮ್​ ಖೇರ್, ​ ನಮ್ಮ ರಾಷ್ಟ್ರಲಾಂಛನದ ಸಿಂಹಕ್ಕೆ ಹಲ್ಲುಗಳಿವೆ, ಅಗತ್ಯಬಿದ್ದರೆ ಕಚ್ಚುತ್ತದೆ, ಹಾಗಾಗಿ ನೀವು ಎಚ್ಚೆತ್ತುಕೊಳ್ಳುವುದು ಒಳ್ಳೆಯದು ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ನೇಹಿತರೇ ಹಲ್ಲುಗಳಿರುವುದರಿಂದಲೇ ಅದನ್ನು ತೋರಿಸಿರುವುದು, ಇದು ಸ್ವತಂತ್ರ ಭಾರತದ ಸಿಂಹ, ಅಗತ್ಯಬಿದ್ದರೆ ಕಚ್ಚುತ್ತದೆ ಜೈ ಹಿಂದ್​​ ಎಂದು ತಮ್ಮ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!