March 4, 2026
Wednesday, March 4, 2026
spot_img

ನದಿ ಬಿಟ್ಟು ನಾಡಿಗೆ ಬಂದ ಮೊಸಳೆ: ಕೋಗಿಲಬನ ನಿವಾಸಿಗಳಲ್ಲಿ ಆತಂಕ!

ಹೊಸದಿಗಂತ ದಾಂಡೇಲಿ:

ನಗರದ ಸಮೀಪದ ಕೋಗಿಲಬನ ಪ್ರದೇಶದಲ್ಲಿ ಬುಧವಾರ ನಸುಕಿನ ವೇಳೆಯಲ್ಲಿ ಬೃಹತ್ ಮೊಸಳೆಯೊಂದು ಕಾಣಿಸಿಕೊಳ್ಳುವ ಮೂಲಕ ಸ್ಥಳೀಯರಲ್ಲಿ ಭೀತಿ ಸೃಷ್ಟಿಸಿದೆ.

ಕಾಳಿ ನದಿ ತೀರಕ್ಕೆ ಹೊಂದಿಕೊಂಡಿರುವ ಕೋಗಿಲಬನದಲ್ಲಿ ನದಿ ದಡದವರೆಗೂ ವಿಸ್ತರಿಸಿರುವ ಕಟ್ಟಡಗಳು ಮತ್ತು ದಟ್ಟವಾಗಿ ಬೆಳೆದಿರುವ ಅಡಿಕೆ, ತೆಂಗಿನ ತೋಟಗಳೇ ಮೊಸಳೆಗಳು ಸುಲಭವಾಗಿ ನಾಡಿಗೆ ಬರಲು ಹಾದಿಯಾಗಿವೆ. ಬುಧವಾರ ಮುಂಜಾನೆ ಮೊಸಳೆಯೊಂದು ಜನವಸತಿ ಪ್ರದೇಶದತ್ತ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ತಕ್ಷಣ ಎಚ್ಚೆತ್ತುಕೊಂಡು ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ನದಿ ದಡದ ನೈಸರ್ಗಿಕ ಪರಿಸರ ಬದಲಾಗಿರುವುದು ಮತ್ತು ಜನವಸತಿ ಹೆಚ್ಚಾಗಿರುವುದು ಮೊಸಳೆಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಈ ಭಾಗದಲ್ಲಿ ಮೊಸಳೆಗಳು ಆಗಾಗ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದರೂ, ನೇರವಾಗಿ ಮನೆಗಳ ಬಳಿ ಬರುತ್ತಿರುವುದು ಜನರ ನಿದ್ದೆಗೆಡಿಸಿದೆ.

ಘಟನೆ ಕುರಿತು ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !