ಉಪ್ಪಿನಂಗಡಿಯಲ್ಲಿ ಮೊಸಳೆ ಪ್ರತ್ಯಕ್ಷ: ಜನತೆಯಲ್ಲಿ ಆತಂಕ

ಹೊಸದಿಗಂತ ವರದಿ, ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಹೊಸ ಬಸ್ ನಿಲ್ದಾಣದ ಬಳಿಯ ನೇತ್ರಾವತಿ ನದಿ ಸೇತುವೆಯ ಸಮೀಪ ಮಂಗಳವಾರದಂದು ಮೊಸಳೆಯೊಂದು ಪತ್ತೆಯಾಗಿದ್ದು, ಜನತೆಯನ್ನು ತಲ್ಲಣಗೊಳಿಸಿದೆ.

ನೇತ್ರಾವತಿ ಸೇತುವೆಯ ಇಳಂತಿಲ ಗ್ರಾ.ಪಂ. ವ್ಯಾಪ್ತಿಯ ನದಿಯ ಪಾರ್ಶ್ವದಲ್ಲಿ ಮೊಸಳೆಯೊಂದು ಮರಳ ದಿಬ್ಬದಲ್ಲಿ ವಿರಮಿಸುತ್ತಿರುವುದನ್ನು ಇಳಂತಿಲ ಗ್ರಾ.ಪಂ. ಮಾಜಿ ಸದಸ್ಯ, ಫಯಾಜ್ ಯು.ಟಿ. ಅವರು ಗಮನಿಸಿದ್ದಾರೆ.

ಕಳೆದ ೨೦೨೨ರ ಸೆಪ್ಟೆಂಬರ್ ತಿಂಗಳಲ್ಲಿ ಪಂಜಳದಲ್ಲಿ ನೇತ್ರಾವತಿ ನದಿಯಲ್ಲಿ ಮೂರು ಮೊಸಳೆಗಳು ಕಂಡು ಬಂದಿದ್ದು, ಬಳಿಕ ನದಿಯಲ್ಲಿ ಮೊಸಳೆಗಳು ಕಾಣಿಸಿರಲಿಲ್ಲ. ಇದೀಗ ಮತ್ತೆ ಉಪ್ಪಿನಂಗಡಿ ಹೃದಯ ಭಾಗದಲ್ಲಿಯೇ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆಯಾಗುವುದರೊಂದಿಗೆ ನದಿಯಲ್ಲಿ ಮೊಸಳೆಗಳಿದೆ ಎನ್ನುವುದಕ್ಕೆ ಪುಷ್ಠಿ ದೊರಕಿದೆ.

ಇಂದು ಮೊಸಳೆ ಕಂಡು ಬಂದ ಸ್ಥಳಕ್ಕೆ ಸುಮಾರು ೨೦೦ ಮೀ. ದೂರದಲ್ಲಿ ನೇತ್ರಾವತಿ- ಕುಮಾರಧಾರಾ ನದಿಗಳು ಸಂಗಮವಾಗುತ್ತಿದ್ದು, ಅಲ್ಲೇ ಇರುವ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯ ಸ್ನಾನಘಟ್ಟದಲ್ಲಿ ಪಿಂಡ ಪ್ರದಾನ ಕಾರ್ಯ, ತೀರ್ಥ ಸ್ನಾನಗಳು ನಿರಂತರ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಪರಿಸರದಲ್ಲಿ ಮೊಸಳೆ ಕಂಡು ಬಂದಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!