March 22, 2026
Sunday, March 22, 2026
spot_img

ನದಿಯಲ್ಲಿ ಇರಬೇಕಾದ ಮೊಸಳೆ ಈಗ ಗ್ರಾಮದೊಳಗೆ: ಅರಣ್ಯ ಇಲಾಖೆ ಫುಲ್ ಅಲರ್ಟ್!

ಹೊಸದಿಗಂತ ಬೀದರ್:

ಜಿಲ್ಲೆಯ ಔರಾದ್ (ಬಿ) ಮಾರ್ಗ ಮಧ್ಯೆ ಇರುವ ಕೌಠಾ (ಬಿ) ಗ್ರಾಮದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹತ್ತಿರದ ಮಾಂಜರಾ ನದಿಯಿಂದ ಈ ಮೊಸಳೆ ಗ್ರಾಮದ ಹತ್ತಿರ ಬಂದಿದೆ ಎಂದು ಶಂಕಿಸಲಾಗಿದೆ.

ಗ್ರಾಮದ ಸಮೀಪ ಮೊಸಳೆ ಇರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಗಾಬರಿಗೊಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗ್ರಾಮದ ಜನರಿಗೆ ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಲು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಾದ್ಯಂತ ಡಂಗೂರ ಸಾರಲಾಗಿದೆ. ಜನರು ನದಿ ದಂಡೆ ಅಥವಾ ಜನನಿಬಿಡವಲ್ಲದ ಪ್ರದೇಶಗಳಿಗೆ ಹೋಗುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಘಟನೆಯ ಬಗ್ಗೆ ಈಗಾಗಲೇ ಅರಣ್ಯ ಇಲಾಖೆಗೆ ಅಧಿಕೃತ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೊಸಳೆಗಾಗಿ ಶೋಧ ನಡೆಸಲಿದ್ದಾರೆ. ಮೊಸಳೆ ಪತ್ತೆಯಾದ ಕೂಡಲೇ ಅದನ್ನು ಸುರಕ್ಷಿತವಾಗಿ ಹಿಡಿದು ನದಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !