July 22, 2026
Wednesday, July 22, 2026
spot_img

ಹಾಸನದಲ್ಲಿ ಎಳನೀರು ಕೀಳುವಾಗ ಆಯತಪ್ಪಿ ಬಿದ್ದು ಯುವಕ ಸಾ*ವು

ಹೊಸ ದಿಗಂತ ವರದಿ ಹಾಸನ :

ಎಳನೀರು ಕೀಳುವಾಗ ಆಯತಪ್ಪಿ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ, ಅಣ್ಣೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಭಿಷೇಕ್ (23) ಮೃತಪಟ್ಟ ಯುವಕ. ಎಳನೀರು ಕೀಳಲು ತೆಂಗಿನಮರ ಹತ್ತಿದ್ದ ಅಭಿಷೇಕ್ ತೆಂಗಿನಮರದಿಂದ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾನೆ.


ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !