February 14, 2026
Saturday, February 14, 2026
spot_img

ಶ್ರೀಶೈಲಂಗೆ ತೆರಳುತ್ತಿದ್ದ ಕ್ರೂಸರ್ ವಾಹನ ಅಪಘಾತ: ಮೂವರ ದುರ್ಮರಣ

ಹೊಸದಿಗಂತ ವರದಿ ಯಾದಗಿರಿ:

ಆಂಧ್ರಪ್ರದೇಶದ ಶ್ರೀಶೈಲಂಗೆ ಮಹಾಶಿವರಾತ್ರಿ ನಿಮಿತ್ಯ ಮಲ್ಲಯ್ಯನ ದರ್ಶನ ಪಡೆಯಲು ಶುಕ್ರವಾರ ರಾತ್ರಿ ಯಾದಗಿರಿಯಿಂದ ಶ್ರೀಶೈಲಂಗೆ ಪ್ರಯಾಣ ಬೆಳೆಸಿದ ಭಕ್ತರ ಕ್ರೂಸರ್ ವಾಹನ ಆಂಧ್ರಪ್ರದೇಶದ ಕಲಕುರ್ತಿ ಬಳಿ ಬೆಳಿಗ್ಗೆ 3 ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಘಟನೆಯಲ್ಲಿ 3 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, 5-5 ಜನರಿಗೆ ಗಾಯಗಳಾಗಿವೆ.

ಘಟನೆಯಲ್ಲಿ ಯಾದಗಿರಿ ನಿವಾಸಿಗಳಾದ ರಾಮನಗೌಡ ಗೋಗಿ(೫೨) ಆತನ ಪತ್ನಿ ಮೇಘಾ(೪೮) ಅವರ ಅತ್ತೆ ಮಹಾದೇವಮ್ಮ ಕಲಕೇರಿ(೭೦) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ 5-5 ಜನರಿಗೆ ಗಾಯಗಳಾಗಿದ್ದು, ಕಲಗುರ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:

ರಾಮನಗೌಡರ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಲಕೇರಿಯಿಂದ ಸಂಬಂಧಿಕರು ಮೊಮ್ಮಗನ ಜಾವಳ ಕಾರ್ಯಕ್ರಮ ಮುಗಿಸಿ, ಶುಕ್ರವಾರ ರಾತ್ರಿ ಯಾದಗಿರಿಗೆ ಆಗಮಿಸಿ, ದಂಪತಿಗಳನ್ನು ಶ್ರೀಶೈಲಂಗೆ ಕ್ರೂಸರ್ನಲ್ಲಿ ಕರೆದುಕೊಂಡು ಹೋಗಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !