ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಸಂಸತ್ ಭವನದ ಹೊರಗಡೆ ಫೋನ್‌ನಲ್ಲಿ ಮಾತನಾಡುವ ವೇಳೆ, ಕಾಗೆಯೊಂದು ಅವರ ಮೇಲೆ ದಾಳಿ ಮಾಡಿದೆ.
ರಾಘವ್ ಚಡ್ಡಾ ಅವರ ತಲೆಗೆ ಕಾಗೆಯೊಂದು ಕುಕ್ಕಿ ಹೋಗುವ ದೃಶ್ಯ ಸೆರೆಯಾಗಿದ್ದು,. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೆಚ್ಚಿನವರು ರಾಘವ್ ಚಡ್ಡಾಗೆ ದುರಾದೃಷ್ಟ ಆರಂಭವಾಗಿದೆ ಎನ್ನುತ್ತಿದ್ದಾರೆ.
ಇದಕ್ಕೆ ಕಾರಣವಿದೆ . ಅದೇನೆಂದರೆ ರಾಘವ್ ಚಡ್ಡಾ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೇ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಬಿಜೆಪಿ ಕೂಡ ಈ ಚಿತ್ರವನ್ನು ಟ್ವೀಟ್ ಮಾಡಿದ್ದು, ಸುಳ್ಳುಗಾರನಿಗೆ ಕಾಗೆ ಕಚ್ಚುತ್ತದೆ ಎನ್ನುತ್ತದೆ ಎನ್ನುವ ಮಾತನ್ನು ಕೇಳಿದ್ದೆವು. ಈಗ ಅದನ್ನು ನಿಜವಾಗಿಯೂ ನೋಡಿದ್ದೇವೆ’ ಎಂದು ಟ್ವೀಟ್ ಮಾಡಿದೆ.
ಕಾಗೆ ಕುಕ್ಕಿದ್ದರಿಂದ ರಾಘವ್ ಚಡ್ಡಾಗೆ ಯಾವುದೇ ಸಮಸ್ಯೆ ಆಗಿಲ್ಲ. ರಾಜ್ಯಸಭೆಯ ಕಲಾಪದಲ್ಲಿ ಭಾಗವಹಿಸಿ ಹೊರಗಡೆ ಬರುವಾಗ ಈ ಘಟನೆ ನಡೆದಿದೆ. ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ಬಂದ ಕಾಗೆಯೊಂದು ಅವರಿಗೆ ಕುಕ್ಕಿದೆ. ಈ ವೇಳೆ ಕಾಗೆಯಿಂದ ತಪ್ಪಿಸಿಕೊಳ್ಳಲು ರಾಘವ್ ಚಡ್ಡ ಬಗ್ಗಿದರೂ ಸಹಾಯವಾಗಲಿಲ್ಲ.
ರಾಘವ್ ಚಡ್ಡಾ ನೀವು ಆದಷ್ಟು ಬೇಗ ಶುದ್ಧೀಕರಣಗೊಳ್ಳಬೇಕು. ಏಕೆಂದರೆ ಇದು ಅಪಶಕುನ. ಅದಲ್ಲದೆ, ನೀವು ಮದುವೆಯಾಗುವ ಹಂತದಲ್ಲಿದ್ದೀರಿ. ಯಮುನಾ ನದಿ ಹೇಗಿದ್ದರೂ ಮನೆಬಾಗಿಲಿಗೆ ಬರುತ್ತಿದೆ. ಆದಷ್ಟು ಶೀಘ್ರವಾಗಿ ಅದರಲ್ಲಿಯೇ ಮುಳುಗಿ ಶುದ್ದೀಕರಣ ಮಾಡಿಕೊಳ್ಳಿ’ ಎಂದು ಓರ್ವ ಸಲಹೆ ನೀಡಿದ್ದಾರೆ.