ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ವಿಶ್ಕಪ್‌ನಲ್ಲಿ ಇಂದು ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿದೆ.
ಬೇರೆ ಯಾವ ದೇಶದ ಜೊತೆ ನಡೆಯುವ ಪಂದ್ಯಕ್ಕೂ ಇಷ್ಟು ಹೈಪ್ ಸಿಗೋದಿಲ್ಲ ಅಂದ್ರೂ ತಪ್ಪಾಗಲಾರದು, ಯಾಕೆ ಗೊತ್ತಾ?
ಇಂದು ಮಧ್ಯಾಹ್ನ ಎರಡು ಗಂಟೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಬೆಳಗ್ಗಿನಿಂದಲೇ ಕ್ರೀಡಾಭಿಮಾನಿಗಳು ಸ್ಟೇಡಿಯಂ ಸುತ್ತಲು ನಿಂತಿದ್ದಾರೆ.
ಟೀಂ ಇಂಡಿಯಾವನ್ನು ಹುರಿದುಂಬಿಸಲು ಜನಸಾಗರವೇ ನಿಂತಿದ್ದು, ಹೆಚ್ಚಿನ ಮಂದಿ ಬ್ಲೂ ಜೆರ್ಸಿ ಹಾಕಿದ್ದಾರೆ. ಇಂಡಿಯಾ ಇಂಡಿಯಾ ಎನ್ನುವ ಕೂಗು ಎಲ್ಲೆಡೆ ಮಾರ್ದನಿಸಿದೆ. ಈ ಎನರ್ಜಿ ಪಂದ್ಯದಲ್ಲಿ ಕಾಣಿಸುತ್ತದೆಯಾ? ಕಾದುನೋಡಬೇಕಿದೆ..