Monday, October 13, 2025

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಿಆರ್‌ಪಿಎಫ್ ನಿಂದ 10 ಸಾವಿರಕ್ಕೂ ಹೆಚ್ಚು ರೇಡಿಯೋ ಸೆಟ್‌ ವಿತರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಛತ್ತೀಸ್‌ಗಢದ ಬಸ್ತಾರ್‌ನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವಿಶೇಷ ಸಾರ್ವಜನಿಕ ಅಭಿಯಾನದ ಭಾಗವಾಗಿ ಸಿಆರ್‌ಪಿಎಫ್ 10,000 ಕ್ಕೂ ಹೆಚ್ಚು ರೇಡಿಯೋ ಸೆಟ್‌ಗಳನ್ನು ವಿತರಿಸಿದೆ.

ರಾಷ್ಟ್ರೀಯ ಚಿಂತನೆಯನ್ನು ಹರಡಲು ಮತ್ತು ಸ್ಥಳೀಯರನ್ನು ಮಾವೋವಾದಿ ಸಿದ್ಧಾಂತದಿಂದ ದೂರವಿಡಲು ಗ್ರಾಮಗಳಲ್ಲಿ ನೂರಾರು ಸಣ್ಣ ಮತ್ತು ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿದ ನಂತರ ಅರೆಸೇನಾಪಡೆ ಇತ್ತೀಚೆಗೆ ಸುಮಾರು ನಾಲ್ಕು ತಿಂಗಳ ಕಾಲ ಈ ಅಭಿಯಾನ ನಡೆಸಿದೆ.

ಬಸ್ತಾರ್ ಪ್ರದೇಶದ ಏಳು ಜಿಲ್ಲೆಗಳಿಗೆ ವಿಶೇಷ ನಾಗರಿಕ ಕ್ರಿಯಾ ಕಾರ್ಯಕ್ರಮವನ್ನು ಈ ವರ್ಷದ ಆರಂಭದಲ್ಲಿ ಗೃಹ ಸಚಿವಾಲಯ(ಎಂಎಚ್‌ಎ) 1.62 ಕೋಟಿ ರೂ.ಗಳ ಬಜೆಟ್ ಹಂಚಿಕೆಯೊಂದಿಗೆ ಪ್ರಾರಂಭಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜಾಪುರ ಜಿಲ್ಲೆಯಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯ ಕಮಾಂಡರ್, ಈ ಪ್ರದೇಶದ ದೂರದ ಮತ್ತು ಒಳ ಪ್ರದೇಶಗಳಲ್ಲಿ ನಿಯೋಜಿಸಲಾದ ಅರೆಸೇನಾಪಡೆಯ 180 ತುಕಡಿಗಳು ಒಟ್ಟು 10,800 ರೇಡಿಯೋ ಸೆಟ್‌ಗಳನ್ನು ವಿತರಿಸಿವೆ ಎಂದು ಅವರು ಹೇಳಿದ್ದಾರೆ.

ಈ ವಿಶೇಷ ಕಾರ್ಯಕ್ರಮವು ಸುಮಾರು 54,000 ವ್ಯಕ್ತಿಗಳನ್ನು ಸಂಪರ್ಕಿಸುವ ಗುರಿ ಹೊಂದಿದೆ. ಪ್ರತಿ ಕುಟುಂಬವನ್ನು ಐದು ಸದಸ್ಯರ ಘಟಕವೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.

error: Content is protected !!