ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 25 ರನ್‌ಗಳಿಂದ ಸೋತಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ವೈಫಲ್ಯದಿಂದ ಎಂದು CSK ನಾಯಕ ರುತುರಾಜ್ ಗಾಯಕ್ವಾಡ್ ಹೇಳಿದ್ದಾರೆ.
ಪವರ್ ಪ್ಲೇನಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಗೆಲುವಿನ ಸಾಧ್ಯತೆಯನ್ನು ಕುಗ್ಗಿಸಿತು. ಅಲ್ಲದೆ, ಬೌಲಿಂಗ್‌ನಲ್ಲಿ 15-20 ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟಿರುವುದು ಕೂಡ ಸೋಲಿಗೆ ಕರಣ ಎಂದು ಹೇಳಿದ್ದಾರೆ.
ಕಳೆದ ಮೂರು ಪಂದ್ಯಗಳಲ್ಲಿ ನಾವು ಒಟ್ಟಿಗೆ ಸಾಮರ್ಥ್ಯ ತೋರಲು ವಿಫಲರಾಗಿದ್ದೇವೆ. ಸುಧಾರಣೆಗೆ ಪ್ರಯತ್ನಿಸುತ್ತಿದ್ದೇವೆ, ಆದರೆ ಫಲಿತಾಂಶ ಸಿಗುತ್ತಿಲ್ಲ. ಪವರ್ ಪ್ಲೇನಲ್ಲಿ ಪ್ರಮುಖ ವಿಕೆಟ್‌ಗಳು ಬೀಳುತ್ತಿರುವುದು ನಮ್ಮ ಪತನಕ್ಕೆ ಕಾರಣವಾಗುತ್ತಿದೆ. ಇದು ಚಿಂತಿಸಬೇಕಾದ ವಿಷಯವಾಗಿದ್ದು, ಬೌಲಿಂಗ್‌ನಲ್ಲೂ ಹೆಚ್ಚುವರಿ ರನ್‌ಗಳನ್ನು ನೀಡುತ್ತಿದ್ದೇವೆ, ಎಂದು ರುತುರಾಜ್ ವಿವರಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 183 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 158 ರನ್‌ಗೆ ಸೀಮಿತವಾಯಿತು.