ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಮಹಾಬಲಿಪುರಂನಲ್ಲಿ ಸಿ.ಟಿ.ರವಿ, ಅಣ್ಣಾಮಲೈ ಯೋಗಾಭ್ಯಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜೂನ್‌ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಭಾರತ ಮಾತ್ರವಲ್ಲದೆ, ಇಡೀ ವಿಶ್ವದಾದ್ಯಂತ ಜನ ಯೋಗಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಅಂತೆಯೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಟಿ.ರವಿ ತಮಿಳುನಾಡಿನ ಐತಿಹಾಸಿಕ ನಗರವಾದ ಮಹಾಬಲಿಪುರಂನಲ್ಲಿ ಯೋಗ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಸಾಥ್‌ ನೀಡಿದರು.

ಈ ಕುರಿತು ಟ್ವೀಟ್‌ ಮಾಡಿದ ಅಣ್ಣಾಮಲೈ, ʻಸಿ.ಟಿ.ರವಿ ಮಹಾಬಲಿಪುರಂನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದಕ್ಕೆ ಸಂತೋಷವಾಗಿದೆʼ ಎಂದು ಪೋಸ್ಟ್‌ ಮಾಡಿದ್ದಾರೆ.

ಐತಿಹಾಸಿಕ ಮಹಾಬಲಿಪುರಂನಲ್ಲಿರುವ ಕೃಷ್ಣನ ಬೆಣ್ಣೆ ಬಂಡೆಯ ಮುಂದೆ ಮತ್ತು ʻಅರ್ಜುನ ತಪಸ್ಸಿʼನ ಮಂದಿರದ ಬಳಿ ಬಳಿ ಈ ಆಚರಣೆಯನ್ನು ನಡೆಸಲಾಯಿತು. ಇದು ನಮ್ಮ ಗೌರವಾನ್ವಿತ ಪ್ರಧಾನಿ ಭೇಟಿ ಬಳಿಕ ಪ್ರವಾಸಿಗರ ಭೇಟಿಯಲ್ಲಿ ಈ ಸ್ಥಳ ಹೆಚ್ಚಳವನ್ನು ಕಂಡಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ 2019 ರಲ್ಲಿ ಮೋದಿ ಮಹಾಬಲಿಪುರಂಗೆ ಭೇಟಿ ನೀಡಿದ್ದರು.

ಆರೋಗ್ಯಕರ ನಾಳೆಗಾಗಿ ಯೋಗವನ್ನು ನಮ್ಮ ದಿನಚರಿಯ ಭಾಗವಾಗಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ ಎಂದು ಈ ಸಂದರ್ಭದಲ್ಲಿ ಕಾರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!