ಹೊಸದಿಗಂತ ವರದಿ ಮಂಗಳೂರು :
ಕಾಡಾನೆಯೊಂದು ನಾಡಿಗೆ ಬಂದು ರಾಜರಸ್ತೆಯಲ್ಲಿಯೇ ಬಿಂದಾಸ್ ಹೆಜ್ಜೆ ಹಾಕುತ್ತಿರುವ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲಾಗುತ್ತಿದೆ.
ಈ ಘಟನೆ ಕೊಡಗಿನ ಪೊನ್ನಂಪೇಟೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ ಎಂಬ ಮಾಹಿತಿ ಇದೆ.
ಆನೆ ಇಲ್ಲಿನ ನ್ಯಾಯಾಲಯದ ಸಮೀಪ ಪ್ರತ್ಯಕ್ಷವಾಗಿದ್ದು, ಬಳಿಕ ಕುಂದ ರಸ್ತೆ ಮಾರ್ಗವಾಗಿ ಎಪಿಸಿಎಂಎಸ್ ತೋಟ ಹಾಗೂ.ಮುಖ್ಯ ರಸ್ತೆಯಲ್ಲಿ ರಾಜಾರೋಷವಾಗಿ ನಡೆದಾಡಿ ಜನರಲ್ಲಿ ಭೀತಿ ಹುಟ್ಟಿಸಿದೆ.
ಇದೀಗ ಅರಣ್ಯ ಇಲಾಖೆ ಸಿಬಂದಿಗಳು ಆನೆಯನ್ನು ಹಿಂಬಾಲಿಸಿದ್ದು, ಸೆರೆ ಹಿಡಿಯಲು ಪ್ರಯತ್ನ ಸಾಗಿದೆ.