ಸೀತಾಫಲವು ನಮ್ಮ ಊರಗಳಲ್ಲಿ ಸುಲಭವಾಗಿ ಸಿಗುವ ಒಂದು ಸಿಹಿಯಾದ ಹಣ್ಣು. ಆಯುರ್ವೇದದ ಪ್ರಕಾರ, ಇದರ ಎಲೆಗಳಿಂದ ಹಿಡಿದು ತಿರುಳಿನೊಳಗಿನ ಬೀಜಗಳವರೆಗೂ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುವ ಗುಣವಿದೆ. ಪೋಷಕಾಂಶಗಳಿಂದ ಸಮೃದ್ಧವಾದ ಈ ಹಣ್ಣು ದೇಹಕ್ಕೆ ಶಕ್ತಿ ನೀಡುವುದಲ್ಲದೆ, ಹಲವಾರು ದೀರ್ಘಕಾಲದ ಕಾಯಿಲೆಗಳ ನಿಯಂತ್ರಣಕ್ಕೂ ಸಹಕಾರಿ. ವಿಟಮಿನ್, ಖನಿಜಗಳು, ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳಿಂದ ತುಂಬಿರುವುದರಿಂದ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಅತ್ಯುತ್ತಮ.
ಆಯುರ್ವೇದ ತಜ್ಞರ ಪ್ರಕಾರ, ಸೀತಾಫಲ ನಿಯಮಿತ ಸೇವನೆಯಿಂದ ಅಲ್ಸರ್, ಅಸಿಡಿಟಿ, ಮಧುಮೇಹ, ಹೃದಯ ಕಾಯಿಲೆ ಮತ್ತು ರಕ್ತಹೀನತೆ ಮುಂತಾದ ಸಮಸ್ಯೆಗಳನ್ನು ತಡೆಗಟ್ಟಬಹುದು.
ಗರ್ಭಿಣಿಯರಿಗೆ ಇದು ವಿಶೇಷವಾಗಿ ಉಪಕಾರಿ, ಏಕೆಂದರೆ ಗರ್ಭದಲ್ಲಿರುವ ಶಿಶುವಿನ ಮೆದುಳು ಮತ್ತು ನರಮಂಡಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದಲ್ಲದೆ, ತೂಕ ಹೆಚ್ಚಿಸಿಕೊಳ್ಳಬೇಕಾದವರು, ಸೀತಾಫಲದ ರಸದಲ್ಲಿ ಹಾಲು ಮತ್ತು ಜೇನು ಸೇರಿಸಿ ಸೇವಿಸಿದರೆ ಉತ್ತಮ ಫಲಿತಾಂಶ ಕಾಣಬಹುದು.
ಈ ಹಣ್ಣು ದೃಷ್ಟಿಶಕ್ತಿ ಹೆಚ್ಚಿಸಲು ಸಹಕಾರಿ. ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಕಡಿಮೆ ಮಾಡಲು ಮತ್ತು ಚರ್ಮಕ್ಕೆ ಮೃದುತ್ವ ನೀಡಲು ಇದರಲ್ಲಿ ಇರುವ ಮೈಕ್ರೊನ್ಯೂಟ್ರಿಯೆಂಟ್‌ಗಳು ನೆರವಾಗುತ್ತವೆ.
ವಿಟಮಿನ್ B6 ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿ ಆಸ್ತಮಾವನ್ನು ಕಡಿಮೆ ಮಾಡುತ್ತದೆ. ಬೀಜಗಳಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸೀತಾಫಲದಲ್ಲಿ ಇರುವ ಮೆಗ್ನೀಸಿಯಮ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಫೈಬರ್ ಹೆಚ್ಚು ಇರುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಇದರಲ್ಲಿರುವ ನಿಯಾಸಿನ್ ಮತ್ತು ಡಯಟರಿ ಫೈಬರ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಕಾರಿ.
ವಿಟಮಿನ್ A ಕೂದಲು ಮತ್ತು ಚರ್ಮದ ಆರೈಕೆಗೆ ಅಗತ್ಯವಾಗಿದ್ದು, ಸೀತಾಫಲದಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿದೆ. ಎಲೆ ಮತ್ತು ಬೇರಿನ ಕಷಾಯ ಮಧುಮೇಹ, ವೃದ್ಧಾಪ್ಯ, ಹೃದಯಾಘಾತ ತಡೆಯುವಲ್ಲಿ ಸಹಕಾರಿ ಎಂದು ತಜ್ಞರು ಹೇಳುತ್ತಾರೆ.
ಸೀತಾಫಲವು ಕೇವಲ ಸಿಹಿ ಹಣ್ಣಲ್ಲ, ಅದು ಆರೋಗ್ಯದ ಖಜಾನೆ. ಸರಿಯಾದ ರೀತಿಯಲ್ಲಿ ಮತ್ತು ಮಿತವಾಗಿ ಸೇವಿಸಿದರೆ, ಇದು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಅನೇಕ ಕಾಯಿಲೆಗಳನ್ನು ತಡೆಗಟ್ಟುವ ಶಕ್ತಿಯೂ ಹೊಂದಿದೆ. ಆದ್ದರಿಂದ, ಆರೋಗ್ಯ ಕಾಪಾಡಿಕೊಳ್ಳಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸೀತಾಫಲವನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.