ಸೇನಾ ಸಿಬ್ಬಂದಿಗಳಿಂದ ಸೈಬರ್‌ ಭದ್ರತಾ ಉಲ್ಲಂಘನೆ: ಉನ್ನತ ಮಟ್ಟದ ತನಿಖೆ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೇನಾ ಸಿಬ್ಬಂದಿಗಳಿಂದ ವಾಟ್ಸಾಪ್‌ ನಲ್ಲಿ ಸೈಬರ್‌ ಭದ್ರತಾ ಉಲ್ಲಂಘನೆಯಾಗಿರುವುದನ್ನು ಗುಪ್ತಚರ ಇಲಾಖೆಯು ಕಂಡು ಹಿಡಿದಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ರಕ್ಷಣಾ ಮೂಲಗಳು ತಿಳಿಸಿರುವ ಪ್ರಕಾರ ” ಸೈಬರ್ ಭದ್ರತೆಯು ಉಲ್ಲಂಘನೆಯಾಗಿರುವ ಬಗ್ಗೆ ಸೇನೆ ಮತ್ತು ಗುಪ್ತಚರ ಸಂಸ್ಥೆಗಳು ಕಂಡುಹಿಡಿದಿದ್ದು, ವಾಟ್ಸಾಪ್‌ ಗ್ರುಪ್‌ ಗಳಲ್ಲಿ ಮಾಹಿತಿ ಸೋರಿಕೆಯಾಗಿದ್ದು ಈ ಘಟನೆಯು ನೆರೆ ರಾಷ್ಟ್ರಗಳ ಬೇಹುಗಾರಿಕಾ ಚಟುವಟಿಕೆಗಳ ಭಾಗವಾಗಿರಬಹದು ಎಂದು ಊಹಿಸಲಾಗಿದೆ”

“ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು, ಆಫಿಷಿಯಲ್‌ ಸೀಕ್ರೇಟ್‌ ಆಕ್ಟ್‌ ಅಡಿಯಲ್ಲಿ ಬರುವ ಮಾಹಿತಿಗಳನ್ನು ಸೋರಿಕೆ ಮಾಡಿರುವ ಮತ್ತು ಭದ್ರತಾ ಉಲ್ಲಂಘನೆಗೆ ಕಾರಣವಾಗಿರುವ ಆರೋಪಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ರಕ್ಷಣಾ ಮೂಲಗಳು ಹೇಳಿವೆ. ತನಿಖೆಯ ಕುರಿತಾಗಿ ಹೆಚ್ಚಿನ ಮಾಹಿತಿ ನೀಡಲು ಮೂಲಗಳು ನಿರಾಕರಿಸಿದ್ದು “ತನಿಖೆಯು ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿರುತ್ತದೆ ಆರೋಪಿಗಳ ಕುರಿತಾಗಿ ಮಾಹಿತಿ ನೀಡುವುದರಿಂದ ತನಿಖೆ ದಿಕ್ಕು ತಪ್ಪ ಬಹುದಾದ ಸಂಭವವಿದೆ” ಎಂದು ಮೂಲಗಳು ಹೇಳಿವೆ.

ನೆರೆಯ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ಥಾನದ ಗುಪ್ತಚರ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಆನ್‌ ಲೈನ್‌ ನಲ್ಲಿ ರಕ್ಷಣಾ ಸಿಬ್ಬಂದಿಗಳೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಅವರ ಮೂಲಕ ಸೇನೆ ಮತ್ತು ರಕ್ಷಣೆಗೆ ಸಂಬಂಧ ಪಟ್ಟಿರುವ ಸೂಕ್ಷ್ಮ ಮಾಹಿತಿಗಳನ್ನು ಸೋರಿಕೆ ಮಾಡಲು ಹುನ್ನಾರ ನಡೆಸುತ್ತಾರೆ. ಇತ್ತೀಚಿನ ದಿನಗಳ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು ಅವುಗಳಲ್ಲಿ ಹೆಚ್ಚಿನವು ವಿಫಲವಾಗುತ್ತವೆ. ಆದರೂ ಅವರ ಆನ್‌ ಲೈನ ಜಾಲದಲ್ಲಿ ಸಿಲುಕಿರುವ ಕೆಲವು ಸೇನಾ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!