ಹೊಸದಿಗಂತ ವರದಿ ವಿಜಯಪುರ:
ʼಸೈಕಲ್ ಸವಾರಿʼ ಚಲನಚಿತ್ರ ನ.3ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ದೇಶಕ, ನಟ ದೇವು ಅಂಬಿಗ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳಿಯೊಂದರಲ್ಲಿ ನಡೆಯುವ ಪ್ರೇಮಕಥೆಯಲ್ಲಿ ನಾಯಕ ಹಳ್ಳಿ ಹಳ್ಳಿಗೆ ಸೈಕಲ್ ಸವಾರಿ ಮಾಡಿಕೊಂಡು ಬಾಂಬೆ ಮಿಠಾಯಿ ಮಾರಾಟ ಮಾಡುತ್ತಾನೆ. ಈ ವೇಳೆ ಹುಟ್ಟಿರುವ ಪ್ರೇಮಕಥೆಯನ್ನು ʼಸೈಕಲ್ ಸವಾರಿʼ ಚಲನಚಿತ್ರದಲ್ಲಿ ಕಾಣಬಹುದು ಎಂದರು.
ಈ ಚಲನಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಮರೆತು ಹೋಗಲು ಏನು ಕಾರಣ ಎನ್ನುವ ಚಿತ್ರಗೀತೆ ಹೃದಯಕ್ಕೆ ತಟ್ಟುವಂತಿದೆ ಎಂದು ತಿಳಿಸಿದರು.
ಸೈಕಲ್ ಸವಾರಿ ಚಿತ್ರದಲ್ಲಿ ಕಾಮಿಡಿ, ಲವ್, ತ್ರಿಲ್ಲರ್, ಸಸ್ಪೆನ್ಸ್ ಸೇರಿದಂತೆ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ನಿಂದ ಕೂಡಿದೆ ಎಂದರು.
ನಟಿ ದೀಕ್ಷಾ ಭಿಸೆ, ವಿನೋದ ರಾಠೋಡ , ಸಚಿನ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.