ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಯಲ್ಲಿ ಭಾರೀ ಮಳೆಯಾಗುತ್ತಿದ್ದು, ಬಿಪೋರ್ಜಾಯ್ ಚಂಡಮಾರುತದ (Cyclone Biparjoy) ಪ್ರಭಾವದಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿವೆ.
ಇದರ ನಡುವೆ ಮುಂಬೈಯ (Mumbai) ಜುಹುವಿನ ಸಮುದ್ರದಲ್ಲಿ (Juhu Beach) ನಾಲ್ವರು ಬಾಲಕರು ಮುಳುಗಿದ್ದಾರೆ .
ಸೋಮವಾರ ಮುಂಬೈನ ಜುಹು ಬೀಚ್‌ನಲ್ಲಿ ಐವರು ಮುಳುಗಿದ್ದು, ಈ ಪೈಕಿ ಒಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, 4 ಮಂದಿ ನಾಪತ್ತೆಯಾಗಿದ್ದಾರೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಜುಹು ಕಡಲತೀರದಲ್ಲಿ 5 ಜನರು ವಾಕ್ ಮಾಡಲು ಹೋದಾಗ ಭಾರೀ ಅಲೆಗಳು ಅವರನ್ನು ಎಳೆದೊಯ್ದಿದೆ.
12 ರಿಂದ 15 ವರ್ಷ ವಯಸ್ಸಿನ ಹುಡುಗರು ತೀರದಿಂದ ಸುಮಾರು ಅರ್ಧ ಕಿಲೋಮೀಟರ್ ಸಮುದ್ರದಲ್ಲಿ ಮುಳುಗಿದರು. ಇದರಲ್ಲಿ ಒಬ್ಬನನ್ನು , ಸ್ಥಳೀಯ ಮೀನುಗಾರರಿಂದ ರಕ್ಷಿಸಿದ್ದಾರೆಸಮುದ್ರದಲ್ಲಿ ಹೆಚ್ಚಿನ ಉಬ್ಬರವಿಳಿತವು ಶೋಧ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ ಬೀಚ್‌ನಲ್ಲಿ, ನಗರದ ನಾಗರಿಕ ಸಂಸ್ಥೆ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಥವಾ BMC ಯಿಂದ ಜೀವರಕ್ಷಕರನ್ನು ನೇಮಿಸಲಾಗಿದೆ. ಕಡಲತೀರಗಳಲ್ಲಿ ಹಲವಾರು ಕೆಂಪು ಬಾವುಟ ನೆಟ್ಟಿದ್ದು ಇದು ದೊಡ್ಡ ಅಲೆಗಳು ಮತ್ತು ಬಲವಾದ ಪ್ರವಾಹಗಳನ್ನು ಸೂಚಿಸುತ್ತದೆ.