February 6, 2026
Friday, February 6, 2026
spot_img

ದಿತ್ವಾ ಚಂಡಮಾರುತ: ಭಾರತದಿಂದ ಶ್ರೀಲಂಕಾಗೆ 80 ಎನ್‌ಡಿಆರ್‌ಎಫ್ ಸಿಬ್ಬಂದಿ ರವಾನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿತ್ವಾ ಚಂಡಮಾರುತದಿಂದ ನೆರೆಯ ದೇಶದಲ್ಲಿ ಸಂಭವಿಸಿದ ಭಾರೀ ಪ್ರವಾಹದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಭಾರತ ಶನಿವಾರ 80 ಎನ್‌ಡಿಆರ್‌ಎಫ್ ರಕ್ಷಣಾ ಪಡೆ ಮತ್ತು ವಿಶೇಷ ಶೋಧ ನಾಯಿಗಳ ತುಕಡಿಯನ್ನು ಶ್ರೀಲಂಕಾಕ್ಕೆ ಕಳುಹಿಸಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿಯನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ದೆಹಲಿ ಬಳಿಯ ಹಿಂಡನ್ ವಾಯುನೆಲೆಯಿಂದ ಕೊಲಂಬೊಗೆ ನಾಲ್ಕು ರಕ್ಷಣಾ ನಾಯಿಗಳೊಂದಿಗೆ ತಂಡಗಳು ಐಎಲ್ -76 ಐಎಎಫ್ ವಿಮಾನದಲ್ಲಿ ಹೊರಟವು ಎಂದು ವಕ್ತಾರರು ತಿಳಿಸಿದ್ದಾರೆ.

ಶ್ರೀಲಂಕಾದ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಶೋಧ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಬೆಂಬಲಿಸಲು ತಂಡಗಳು ಏರ್ ಬೋಟ್, ಹೈಡ್ರಾಲಿಕ್ ಯಂತ್ರ ಮತ್ತು ಹಲವು ಉಪಕರಣಗಳು, ಸಂವಹನ ಉಪಕರಣಗಳು, ಪ್ರಥಮ ಚಿಕಿತ್ಸಾ ಕಿಟ್‌ಗಳು ಮತ್ತು ಇತರ ಅಗತ್ಯ ರಕ್ಷಣಾ ಸಲಕರಣೆಗಳನ್ನು ಹೊತ್ತೊಯ್ಯುತ್ತಿವೆ ಎಂದು ತಿಳಿದುಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !